ಗ್ಲಾಸು ತೊಳೆದ್ರೆ ತಪ್ಪೇನು- ನಾರಾಯಣ ಗೌಡ

ಗ್ಲಾಸು ತೊಳೆದ್ರೆ ತಪ್ಪೇನು- ನಾರಾಯಣ ಗೌಡ

ಮಂಡ್ಯ, ನ. 30 : ಟೀ ಮಾರಿದ ಮೋದಿ ನಮ್ಮ ದೇಶದ ಪ್ರಧಾನಿ ಯಾದ್ರು, ನಾನು ಟೀ ಗ್ಲಾಸು ತೊಳೆದ್ರೆ ತಪ್ಪೇನು ಎಂದು ಬಿಜೆಪಿ ಅಭ್ಯರ್ಥಿ ನಾರಯಣ ಗೌಡ ಪ್ರಶ್ನಿಸಿದ್ದಾರೆ.
ಕೆಆರ್ ಪೇಟೆಯ ವಡ್ಡರಹಳ್ಳಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಟೀ ಮಾರುತ್ತಿದ್ದರು. ಈಗ ಅವರು ನಮ್ಮ ದೇಶದ ಪ್ರಧಾನಿ ಆಗಿದ್ದಾರೆ. ತಟ್ಟೆ ಗ್ಲಾಸು ತೊಳೆದ್ರೆ ಏನು ತಪ್ಪು ಅನ್ನೋ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ತಿರುಗೇಟು ನೀಡಿದರು.
‘’ನಾನು ಕೂಲಿ ಮಾಡಿದ್ದೇನೆ. ಹೊಟೇಲ್ನಲ್ಲಿಯೂ ಕೆಲಸ ಮಾಡಿದ್ದೇನೆ. ಈಗಲೂ ನಾನು ಲೋಟ ತೊಳೆಯುತ್ತೇನೆ. ನನ್ನ ಹೊಟೇಲಿನಲ್ಲಿ ತಟ್ಟೆ, ಗ್ಲಾಸು ತೊಳೆದ್ರೆ ಏನು ತಪ್ಪು ಅಂತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಪ್ರಶ್ನಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos