ಶುಂಠಿಯ ಆರೋಗ್ಯ ಲಕ್ಷಣಗಳು

ಶುಂಠಿಯ ಆರೋಗ್ಯ ಲಕ್ಷಣಗಳು

ಬೆಂಗಳೂರು: ನಮ್ಮ ಇತ್ತೀಚಿನ ಜೀವನದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಹಲವಾರು ರೀತಿಯ ಪ್ರಯತ್ನಗಳನ್ನು ಮಾಡುತ್ತಿರುತ್ತೇವೆ, ಆದರೆ ನಾವು ದಿನ ನಿತ್ಯ ಬಳಸುವಂತಹ ಪದಾರ್ಥಗಳಲ್ಲಿ ನಮ್ಮ ಆರೋಗ್ಯ ಅಡಗಿದೆ ಅದನ್ನು ನಾವು ಸರಿಯಾಗಿ ಉಪಯೋಗಿಸಿದರೆ ನಮ್ಮ ಆರೋಗ್ಯಕ್ಕೂ ಸಹ ವೃದ್ಧಿಯಾಗುತ್ತದೆ ಹಾಗೂ ನಾವು ಆರೋಗ್ಯವಂತರಾಗಿ ಇರಬಹುದು

ಭಾರತೀಯರು ತಮ್ಮ ಆಹಾರ ಪದಾರ್ಥಗಳಲ್ಲಿ ಶುಂಠಿಯನ್ನು ಹೆಚ್ಚಾಗಿ ಬಳಸುತ್ತಾರೆ. ಖಾರ ಹಾಗೂ ಪರಿಮಳಕ್ಕೆ ಹೆಸರುವಾಸಿಯಾಗಿರುವ ಈ ಶುಂಠಿಯೂ ಆಹಾರ ಪದಾರ್ಥಗಳ ರುಚಿಯನ್ನು ಹೆಚ್ಚಿಸುತ್ತದೆ. ಎಲ್ಲರ ಅಡುಗೆ ಮನೆಗಳಲ್ಲಿ ಶುಂಠಿಯು ಇದ್ದೆ ಇರುತ್ತದೆ. ಶುಂಠಿಯೂ ಹಲವು ರೋಗಗಳಿಗೆ ಔಷಧಿಯಾಗಿದೆ.

ಶುಂಠಿ, ಮೆಣಸಿನ ಕಾಳು, ಹಿಪ್ಪಲಿಗಳನ್ನು ಪುಡಿ ಮಾಡಿಟ್ಟುಕೊಂಡು, ದಿನಕ್ಕೆರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸಿದರೆ ಗಂಟಲು ನೋವು ಶಮನವಾಗುತ್ತದೆ.

ಅರ್ಧಲೋಟ ಬಿಸಿ ನೀರಿಗೆ ಶುಂಠಿ ರಸ, ಬೆಲ್ಲ ಬೆರೆಸಿ ಕಲಸಿ ಬೆಳಗ್ಗೆ ಮತ್ತು ರಾತ್ರಿ ಮೂರು ದಿನಗಳ ಕಾಲ ಕುಡಿದರೆ ನೆಗಡಿ ನಿವಾರಣೆಯಾಗುತ್ತದೆ.

ಒಂದು ಚಮಚ ಹಸಿಶುಂಠಿ ರಸಕ್ಕೆ ಒಂದು ಚಮಚ ಜೇನುತುಪ್ಪ ಬೆರೆಸಿ ಒಂದರಿಂದ ಎರಡು ಚಮಚ ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ವಾಂತಿಯಾಗುವುದು ನಿಲ್ಲುತ್ತದೆ.

ಒಂದು ಚಮಚದಷ್ಟು ಹಸಿ ಶುಂಠಿ ರಸಕ್ಕೆ ಅರ್ಧ ಚಮಚ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು, ಕಫ, ಅಸ್ತಮಾ ಕಾಯಿಲೆಯೂ ದೂರವಾಗುತ್ತದೆ.

ಶುಂಠಿ, ಬೆಳ್ಳುಳ್ಳಿ, ಲಕ್ಕಿಸೊಪ್ಪನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿ ಒಂದು ಲೀಟರ್ ನೀರಿನಲ್ಲಿ ಹಾಕಿ ಸಣ್ಣಗಿನ ಉರಿಯಲ್ಲಿ ಕುದಿಸಬೇಕು. ಈ ಕುದಿಸಿದ ನೀರನ್ನು ಬೆಳಗ್ಗೆ ರಾತ್ರಿ ಎರಡು ವಾರಗಳ ಕಾಲ ಕುಡಿದರೆ ಕೀಲುನೋವು ಕಡಿಮೆಯಾಗುತ್ತದೆ.

ಶುಂಠಿಯನ್ನು ಹಾಲಿನಲ್ಲಿ ತೇಯ್ದು ಹಣೆಯ ಮೇಲೆ ಹಾಕಿದರೆ ತಲೆನೋವು ನಿವಾರಣೆಯಾಗುತ್ತದೆ.

ಶುಂಠಿಯ ಕಷಾಯ ತಯಾರಿಸಿ ಅದಕ್ಕೆ ಹಾಲು, ಬೆಲ್ಲ ಸೇರಿಸಿ ಕುಡಿದರೆ ತಲೆನೋವು ಗುಣಮುಖವಾಗುತ್ತದೆ.

ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಶುಂಠಿ, ಮೆಣಸು, ಹಿಪ್ಪಲಿ, ಬೆಲ್ಲ, ನೆಗ್ಗಿಲು ಮುಳ್ಳು, ಕೊಬ್ಬರಿಯನ್ನು ಪುಡಿ ಮಾಡಿಕೊಂಡು ದಿನಕ್ಕೆರಡು ಬಾರಿ ಒಂದು ಚಮಚದಷ್ಟು ಪುಡಿಯನ್ನು ಮೂರು ವಾರಗಳ ಕಾಲ ಸೇವಿಸಿದರೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಶುಂಠಿ ಮತ್ತು ಅಡಿಕೆಯನ್ನು ಪುಡಿ ಮಾಡಿ, ಅದನ್ನು ತೆಂಗಿನ ಕಾಯಿಯ ಹಾಲಿನಲ್ಲಿ ಬೆರೆಸಿ ನಾಲಿಗೆಗೆ ಲೇಪಿಸಿದರೆ ಬಾಯಿಹುಣ್ಣು ನಿವಾರಣೆಯಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos