ಶುಂಠಿ ಸೇವನೆಯಿಂದ ಆರೋಗ್ಯಕ್ಕೆ ಏನೇನು ಲಾಭ

ಶುಂಠಿ ಸೇವನೆಯಿಂದ ಆರೋಗ್ಯಕ್ಕೆ ಏನೇನು ಲಾಭ

ನಿತ್ಯ ಒಂದು ಶುಂಠಿ ಚೂರನ್ನು ಸೇವಿಸಿ. ಇದು ವಿವಿಧ ರೀತಿಯ ಉದರ ಸಮಸ್ಯೆಯಿಂದ ಕಾಪಾಡುತ್ತದೆ.

ಉರಿಯೂತವನ್ನು ಕಡಿಮೆ ಮಾಡುತ್ತದೆ: ಶುಂಠಿಯಲ್ಲಿ ಉರಿಯೂತನ್ನು ಕಡಿಮೆ ಮಾಡುವ ಬಯೋಆ್ಯಕ್ಟಿವ್​ ಗುಣವಿದೆ. ಇದು ಮಾಂಸಖಂಡದಲ್ಲಿರುವ ನೋವು, ಸೆಳೆತವನ್ನು ಕಡಿಮೆ ಮಾಡುತ್ತದೆ. ಆರ್ಥರೈಟಿಸ್​ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಶುಂಠಿ ಸೇವನೆ ಉತ್ತಮ.

ಆ್ಯಸಿಡಿಟಿ: ಆ್ಯಸಿಡ್​ ಉತ್ಪತ್ತಿಯನ್ನು ತಡೆಯುವ ಮಾತ್ರೆಗಳಿಗಿಂತ 6 ಪಟ್ಟು ಉತ್ತಮ ಶುಂಠಿ ಸೇವನೆ. ಆ್ಯಸಿಡಿಟಿಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದಕ್ಕಿಂತ ಶುಂಠಿ ಸೇವನೆ ಉತ್ತಮ. 
ವಾಕರಿಕೆ ಸಮಸ್ಯೆಗೆ ಉತ್ತಮ ಮದ್ದು: ಯಾವುದೇ ಆಹಾರ ಸೇವಿಸಿದಾಗ ಅಥವಾ ಗ್ಯಾಸ್ಟ್ರಿಕ್​ ಆದಾಗ ವಾಕರಿಕೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಶುಂಠಿ ಕಷಾಯ ಅಥವಾ ಉಪ್ಪಿನ ಜೊತೆ ಒಣ ಶುಂಠಿಯನ್ನು ಸೇವಿಸಿ.

ಹಲ್ಲು ನೋವು: ದಂತ ಅಥವಾ ಹಲ್ಲುಗಳಲ್ಲಿ ನೋವು ಕಾಣಿಸಿಕೊಂಡರೆ, ಶುಂಠಿಯಿಂದ ದಂತವನ್ನು ನಿಧಾನವಾಗಿ ಉಜ್ಜಿದರೆ ಹಲ್ಲು ನೋವು ಕಡಿಮೆಯಾಗುತ್ತದೆ.

ಗಂಟಲು ನೋವು: ಒಂದು ಚಮಚ ಶುಂಠಿ ರಸವನ್ನು ಸೇವಿಸುವುದರಿಂದ ಕೆಮ್ಮು, ಗಂಟಲು ನೋವು, ಇನ್ನಿತರ ಗಂಟಲಿನ ಸಮಸ್ಯೆಯಿಂದ ಶೀಘ್ರ ಪರಿಹಾರ ಸಿಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos