ಜಿಯೊದಿಂ‍ದ ಈರುಳ್ಳಿ ಆಫರ್!

ಜಿಯೊದಿಂ‍ದ ಈರುಳ್ಳಿ ಆಫರ್!

ಶಿವಮೊಗ್ಗ, ಡಿ. 27: ಆಫರ್‌ಗಳ ಮೇಲೆ ಆಫರ್‌ಗಳನ್ನು ಕೊಡುತ್ತಾ ಬರುತ್ತಿರುವ, ಅಗ್ಗದ ದರದಲ್ಲಿ ಕರೆ ಸೌಲಭ್ಯವನ್ನು ನೀಡಿದ ಜಿಯೋ ಸಂಸ್ಥೆ ಈಗ ದಿನಬಳಕೆ ವಸ್ತುಗಳ ಮೇಲೂ ಆಫರ್ ನೀಡಲು ಮುಂದಾಗಿದೆ.

ಈರುಳ್ಳಿ ಬೆಲೆ ಶತಕ ಬಾರಿಸಿದ್ದೇ ತಡ ಈರುಳ್ಳಿ ಕೇಂದ್ರಿತ ಭಿನ್ನ ಭಿನ್ನ ಆಫರ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ. ಈರುಳ್ಳಿಯನ್ನು ಜಿಯೋ ಸಂಸ್ಥೆ ಆಫರ್‌ನಲ್ಲಿ ನೀಡುತ್ತಿದೆ. ಸಿಮ್ ಖರೀದಿಸಿದರೆ ಒಂದು ಕೆಜಿ ಈರುಳ್ಳಿ ಉಚಿತವಾಗಿ ನೀಡುತ್ತಿದೆ.  ತಾಲೂಕಿನ ಪುರದಾಳು ಗ್ರಾಮಕ್ಕೆ ಟೆಲಿಕಾಂ ಸಂಸ್ಥೆ ತಂಡ ಆಗಮಿಸಿದೆ. ಗ್ರಾಹಕರು 300 ರೂ. ಕೊಟ್ಟು ಸಿಮ್ ಖರೀದಿಸಿದರೆ, 120 ರೂ. ಬೆಲೆಯಿರುವ ಈರುಳ್ಳಿಯನ್ನು ಉಚಿತವಾಗಿ ನೀಡಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos