ಗಡಿಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಸೇನೆಗೆ ರಾವತ್ ಕರೆ

ಗಡಿಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗುವಂತೆ ಸೇನೆಗೆ ರಾವತ್ ಕರೆ

ನವದೆಹಲಿ, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಪಾಕಿಸ್ಥಾನ ಮತ್ತು ಭಾರತ ನಡುವಿನ ವಿಷಮ ಪರಿಸ್ಥಿತಿ ನಿರ್ಮಾಣವಾಗಿದ್ದು, ಗಡಿಯಲ್ಲಿ ಎಂತಹ ಪರಿಸ್ಥಿತಿಯನ್ನೂ ಎದುರಿಸಲು  ಯೋಧರೆಲ್ಲ ಸಿದ್ಧರಾಗಿರಿ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಭಾರತೀಯ ಸೇನೆಗೆ ಕರೆ ನೀಡಿದ್ದಾರೆ.

ಪಾಕಿಸ್ಥಾನಕ್ಕೆ ಹೊಂದಿಕೊಂಡಿರುವ ಜಮ್ಮು-ಕಾಶ್ಮೀರ ಸೇರಿದಂತೆ ರಾಜಸ್ಥಾನದ ಅಂತಾರಾಷ್ಟ್ರೀಯ ಗಡಿಗೆ ಭೇಟಿ ನೀಡಿದ ಬಿಪಿನ್ ರಾವತ್ ಪರಿಶೀಲನೆ ನಡೆಸಿದ ಬಳಿಕ ಅವರು ಭಾರತೀಯ ಯೋಧರಿಗೆ ಎಂತಹ ಪರಿಸ್ಥಿತಿ ಬಂದರು ಅದನ್ನು ಎದುರಿಸಲು ನಾವು ಯಾವಗಲು ಸಿದ್ದರಾಗಿರಬೇಕು ಎಂದು ಹೇಳಿದ್ದಾರೆ.

ದೇಶದ ಭದ್ರತೆ ಕುರಿತಂತೆ ಪರಿಸ್ಥಿತಿ ವಿಷಮಕ್ಕೆ ತಿರುಗಿದ್ದು, ಯಾವಾಗ ಏನಾಗುತ್ತದೆ ಎಂಬುದನ್ನು ಯಾರು ಹೇಳಲು ಸಾಧ್ಯವಿಲ್ಲ. ಹೀಗಾಗಿ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಿಸಲು ಸಮರ್ಥರಾಗಿ ಎಂದು ಬಿಪಿನ್ ರಾವತ್ ಹೇಳಿದ್ದಾರೆ.

ಫೆ.26ರಂದು ಪಾಕಿಸ್ಥಾನದ ಬಾಲಾಕೋಟ್ನಲ್ಲಿನ ಉಗ್ರ ಕ್ಯಾಂಪ್ ಮೇಲಿನ ಭಾರತೀಯ ವಾಯುದಾಳಿಯ ಏರ್ ಸ್ಟ್ರೈಕ್ ಬಳಿಕ ಗಡಿಯಲ್ಲಿ ಪಾಕಿಸ್ಥಾನ ಸೇನೆ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಸಹ ಪ್ರತ್ಯುತ್ತರ ನೀಡುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos