ಗಂಭೀರ್ ಬಳಿ 2 ವೋಟರ್ ಐಡಿ: ದೂರು ದಾಖಲು

ಗಂಭೀರ್ ಬಳಿ 2 ವೋಟರ್ ಐಡಿ: ದೂರು ದಾಖಲು

ನವದೆಹಲಿ, . 26, ನ್ಯೂಸ್ ಎಕ್ಸ್ ಪ್ರೆಸ್: ನವದೆಹಲಿಯ ಪೂರ್ವ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗೌತಮ್ ಗಂಭೀರ್ ಅವರ ಬಳಿ 2 ವೋಟರ್ ಐಡಿಗಳು ಇದೆ ಎಂದು ಆರೋಪಿಸಿ ಆಮ್ ಆದ್ಮಿ ಪಕ್ಷ ಇಂದು ದೂರು ದಾಖಲಿಸಿದೆ.

ಈ ಬಗ್ಗೆ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಎಪಿಯ ಆತಿಷಿ ಮರ್ಲೇನಾ, ಗಂಭೀರ್ ಬಳಿ ದೆಹಲಿಯ 2 ಪ್ರತ್ಯೇಕ ಕ್ಷೇತ್ರಗಳಾದ ಕರೋಲ್ ಭಾಗ್ ಹಾಗೂ ರಾಜೀಂದರ್ ನಗರ್ ಗಳಲ್ಲಿ 2 ವೋಟರ್ ಐಡಿಗಳಿವೆ ಎಂದು ಹೇಳಿದ್ದಾರೆ.

“ನಾಮಪತ್ರ ಸಲ್ಲಿಕೆಯ ವೇಳೆ ನೀಡಿದ ಅಫಿದಾವತ್ ನಲ್ಲಿ ಅವರು ತಾವು ಕರೋಲ್ ಭಾಗ್ ಪ್ರದೇಶದಲ್ಲೂ ಮತ ಚಲಾಯಿಸಲು ಸಾಧ್ಯವಿರುವ ಇನ್ನೊಂದು ವೋಟರ್ ಐಡಿ ಹೊಂದಿರುವ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಹಾಗೂ ಇದು ಜನ ಪ್ರತಿನಿಧಿತ್ವ ಕಾಯಿದೆಯ ಸೆಕ್ಷನ್ 125ಎ ಇದರ ಉಲ್ಲಂಘನೆಯಾಗಿದ್ದು, ಇದಕ್ಕಾಗಿ 6 ತಿಂಗಳ ತನಕದ ಜೈಲು ಶಿಕ್ಷೆಯಾಗಬಹುದು” ಎಂದು ಆತಿಷಿ ಸುದ್ದಿಗೋಠಿಯಲ್ಲಿ ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos