ಗತವೈಭವದ ನಾಣ್ಯ ಕಣ್ತುಂಬಿಕೊಳ್ಳುವ ಅವಕಾಶ

ಗತವೈಭವದ ನಾಣ್ಯ ಕಣ್ತುಂಬಿಕೊಳ್ಳುವ ಅವಕಾಶ

ಗಾಂಧಿನಗರ,ಜು .27 : ನಾಡು-ನುಡಿ ,ಪರಂಪರೆ, ಸಾಂಸ್ಕೃತಿಕ ಇತಿಹಾಸದ ಜೊತೆಯಲ್ಲಿ, ಗತವೈಭವ ಬಿಂಬಿಸುವ ಅನಾದಿಕಾಲದಲ್ಲಿ ಚಲಾವಣೆಯಲ್ಲಿದ್ದ,ನೋಟು-ನಾಣ್ಯಗಳನ್ನು ಗಾಂಧಿನಗರದ ಶಾಸಕರ ಸದನದಲ್ಲಿ ನೋಡಿ ಕಣ್ತುಂಬಿಕೊಳ್ಳುವ ಅವಕಾಶ ಸಾರ್ವಜನಿಕರಿಗೆ ಕಲ್ಪಿಸಲಾಗಿದೆ.
ಕರುನಾಡ ನಾಣ್ಯ ಪ್ರದರ್ಶನ ಸಂಘ ಸದವಾಕಾಶ ಕಲ್ಪಿಸಿದ್ದು ನೋಡುಗರ ಮೈ ಮನ ನವಿರೇಳಿಸುವುದರ ಜೊತೆಗೆ ನಮ್ಮನ್ನಾಳಿದ ರಾಜ ಮನೆತನಗಳು ಹಾಗುಊ ದೇಶ ವಿದೇಶಗಳ ಪರಂರಾಗತವಾಗಿ ಅವರ ಕಾಲದಲ್ಲಿ (ಬಳಕೆ) ಚಲಾಣೆಯಲ್ಲಿದ್ದ,ನಾಣ್ಯಗಳನ್ನು ನಾವಿಂದು ನೋಡುವ ಅವಕಾಶ ಕರುನಾಡ ನಾಣ್ಯ ಸಂಘ ಕಲ್ಪಿಸಿದೆ.
ಪ್ರಪಂಚದ ಎಲ್ಲಾ ರಾಷ್ಟ್ರಗಳ ಹಳೆಯ ನಾಣ್ಯಗಳು ಮತ್ತು ಇಂದು ಚಾಲ್ತಿಯಲ್ಲಿರುವ ನೋಟುಗಳನ್ನ ಕಣ್ತುಂಬಿಕೊಳ್ಳಬಹುದಾಗಿದೆ
1974 ರಲ್ಲಿ ಕೇವಲ 10 ಜನರೊಂದಿಗೆ ಸ್ಥಾಪನೆಯಾದ ಸಂಘ ಇಂದು 1000 ಸಾವಿರ ಸದಸ್ಯರನ್ನ ಹೊಂದಿದ್ದು, ಕೂಲಿ ಕಾರ್ಮಿಕ,ಚಿಲ್ಲರೆ ವ್ಯಾಪಾರಿಗಳಿಂದಿಡಿದು ಸಾಫ್ಟ್ವೇರ್ ,ಉದ್ಯೋಗಿಗಳು ವೈದ್ಯರು ,ಎಂಜಿನಿಯರ್ ಗಳು ಸಂಘದ ಸದಸ್ಯರಾಗಿದ್ದಾರೆಂದು ಅಧ್ಯಕ್ಷ ಸುರೇಶ್ ತಿಳಿಸಿದ್ದಾರೆ.
ನೋಟು ಮತ್ತು ನಾಣ್ಯಗಳ ಸಂಗ್ರಹಾಲಯ ಸ್ಥಾಪಿಸಲಾಗಿದ್ದು,ಪ್ರತಿ ತಿಂಗಳ ಎರಡನೆ ಭಾನುವಾರ ಸಭೆ ಸೇರಿ ವೈವಿಧ್ಯಮಯ ನಾಣ್ಯಗಳ ಸಂಗ್ರಹ ಮುಂದಿನ ಪೀಳಿಗೆಗೆ ಇತಿಹಾಸದ ರಾಜರುಗಳ ಆಳ್ವಕೆ ಕುರಿತ ಉಪನ್ಯಾಸ ನೀಡುತ್ತಿರುವುದಾಗಿ ಸುರೇಶ್ ವಿವರಿಸಿದರು.
ಉದ್ಯೋಗ,ಹಾಗು ದುಡಿಮೆಯ ಒತ್ತಡ ನಿವಾರಣೆಗಾಗಿ ಇದೊಂದು ಹವ್ಯಾಸಿ ಪ್ರವೃತ್ತಿಯನ್ನಾಗಿಕೊಂಡಿರುವುದಾಗಿ ತಿಳಿಸಿದ್ದಾರೆ.
ಪ್ರತಿ ವರ್ಷ ಪ್ರದರ್ಶನ ಮತ್ತು ಹರಾಜು ಮಾಡುತ್ತೇವೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ನಾಣ್ಯ ಪ್ರದರ್ಶಕರು ಮತ್ತು ಬಿಡ್ಡ್ ದಾರರು ಭಾಗವಹಿಸಿ ಪರಸ್ಪರ ವಿನಿಮಯ ಹಾಗು ಹರಾಜು ನಡೆಯುತ್ತಿದೆ ಎಂದು ಸುರೇಶ್ ವಿವರಿಸಿದ್ದಾರೆ.
ಹೊಸಬರ ಅನ್ವೇಷಣೆಯಲ್ಲಿ ತೊಡಗಿದ್ದು , ಬ್ರಿಟೀಷರ ಪೋರ್ಚುಗೀಸರ ಕಾಲದಿಂದ ಪಾಂಡ್ಯರು, ಮೊಘಲರು,ಔರಂಗಜೇಬ್, ಟಿಪ್ಪುಸುಲ್ತಾನ್,ಮೈಸೂರು ರಾಜರ ಕಾಲದ ಆಣಿ ,ಕಾಲಾಣಿ,ಪೈಸೆ ,ನಯಾಪೈಸೆ, ಎಂಟಾಣೆ, ರೂಪಾಯಿ ನಾಣ್ಯಗಳಿಂದ ಇಡಿದು ಪ್ರಸ್ತುತ ನೋಟುಗಳ ಪ್ರದರ್ಶನ ನೋಡಿ ಕಣ್ತುಂಬಿಕೊಳ್ಳಬಹುದು.
ರಿಪಬ್ಲಿಕ್ ಇಂಡಿಯಾ ನೋಟುಗಳು,ಸ್ವಾತಂತ್ರ್ಯ ನಂತರದ ಗಾಂಧೀಜಿ , ಲಾಲ್ ಬಹಾದ್ದೂರ್ ಶಾಸ್ತ್ರಿ, ಡಾ.ಬಿ.ಆರ್.ಅಂಬೇಡ್ಕರ್, ಜವಹರಲಾಲ್ ನೆಹರು,ಇಂದಿರಾಗಾಂಧಿ, ರಾಜೀವ್ ಗಾಂಧಿ ಭಾವಚಿತ್ರವುಳ್ಳ ನೋಟು ನಾಣ್ಯಗಳನ್ನು ನೋಡಬಹುದು.
ಯಾವ ರಾಜರ ಆಳ್ವಿಕೆ ಕಾಲದಲ್ಲಿ ಕಾಲದಲ್ಲಿ ಆಯಾ ಪ್ರಾಂತ್ಯ ಸುಭೀಕ್ಷವಾಗಿತ್ತು,ಯಾವ ರಾಜರ ಕಾಲದಲ್ಲಿ ಬರಗಾಲ ದಿವಾಳಿಯಾಗಿತ್ತು ಎಂಬುದನ್ನ ಆಯಾ ರಾಜರ ಕಾಲದಲ್ಲಿ ಮುದ್ರಿತಗೊಂಡ ನಾಣ್ಯಗಳಿಂದ ತಿಳಿದು ಕೊಳ್ಳಬಹುದು ಎಂದು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ಸುರೇಶ್ ಅವರು ನೋಟು ನಾಣ್ ಪ್ರದರ್ಶನಕ್ಕೆ ಬರುವ ವಿದ್ಯಾರ್ಥಿಗಳಿಗೆ ಪ್ರತಿಯೊಂದು ನಾಣ್ಯಗಳ ಪರಿಚಯಸಿವುದರ ಜೊತೆಯಲ್ಲಿ ಅಲ್ಲಿನ ಸಂಸ್ಕೃತಿ ಪರಂಪರೆಯ ಕುರಿತು ವಿವರಣೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರತಿ ವರ್ಷ ನೋಟು ಮತ್ತು ನಾಣ್ಯ ಪ್ರದರ್ಶನ ಮಾಡುತ್ತಿದ್ದು,ರಿಪಬ್ಲಿಕ್ ಇಂಡಿಯಾ ಕಾಲದ ಮತ್ತು ಯುಎಸ್ ನೋಟುಗಳಿಗೆ ಪ್ರದರ್ಶನ ಮೇಳದಲ್ಲಿ ಬೇಡಿಕೆ ಇದ್ದು ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿ ಚಲಾವಣೆಯಲ್ಲಿರುವ ನೋಟು ಮತ್ತು ಪೂರ್ವಿಕರ ಕಾಲದಲ್ಲಿದ್ದ,ಸುಮಾರು 200 ವರ್ಷಗಳ ಹಳೆಯ ನಾಣ್ಯಗಳನ್ನು ಪ್ರದರ್ಶನ ಮಾರಟ ,ಹರಾಜು ಮತ್ತು ವಿನಿಮಯ ಮೇಳದಲ್ಲಿಡಲಾಗಿದೆ ಎಂದು ತಿಳಿಸಿದ್ದಾರೆ

ಫ್ರೆಶ್ ನ್ಯೂಸ್

Latest Posts

Featured Videos