ಬೆಳ್ಳುಳ್ಳಿಯಲ್ಲಿರುವ ಆರೋಗ್ಯ ಗುಣಗಳ ಕುರಿತು ನಿಮಗೆಷ್ಟು ಗೊತ್ತು?

ಬೆಳ್ಳುಳ್ಳಿಯಲ್ಲಿರುವ ಆರೋಗ್ಯ ಗುಣಗಳ ಕುರಿತು ನಿಮಗೆಷ್ಟು ಗೊತ್ತು?

7000 ವರ್ಷಗಳಿಂದ ನಾವು ಬೆಳ್ಳುಳ್ಳಿಯನ್ನು ಉಪಯೋಗಿಸುತ್ತಿದ್ದೇವೆ. ಆರೋಗ್ಯದ ಹಾಗೂ ರುಚಿಯ ದೃಷ್ಟಿಯಿಂದ ಇದನ್ನು ಬಳಸಲಾಗುತ್ತಿದೆ.ಇದರ ಬಗ್ಗೆ ಇನ್ನೂ ಕೆಲವು ಉಪಯೋಗಗಳನ್ನು ತಿಳಿಯೋಣ.
ಉಪಯೋಗಗಳು:
ದೇಹವನ್ನು ಹೆಚ್ಚು ಶಾಕವಾಗಿಡಲು ಮತ್ತು ನರಗಳನ್ನು ಹೆಚ್ಚು ಚೈತನ್ಯ ತುಂಬಿಸಿಕೊಳ್ಳಲು ಬೆಳ್ಳುಳ್ಳಿಯನ್ನು ಪ್ರತಿದಿನವೂ ಸೇವಿಸಬೇಕು.ರೋಗ ಯುಕ್ತರಾದ ಕ್ಷಯರೋಗಿಗಳು ದೀರ್ಘಕಾಲ ಪ್ರತಿದಿನವೂ ಬೆಳ್ಳುಳ್ಳಿಯನ್ನು ಬಳಸುತ್ತಿದ್ದರೆ ರೋಗ ಮರುಕಳಿಸುವ ಭಯವಿರುವುದಿಲ್ಲ.ರಕ್ತದ ಒತ್ತಡ ಹೆಚ್ಚಾಗಿರುವ ರೋಗಿಗಳು ಬೆಳ್ಳುಳ್ಳಿಯನ್ನು ಖಂಡಿತವಾಗಿ ಬಳಸಲೇಬೇಕು.ಬೆಳ್ಳುಳ್ಳಿ, ಹಿಪ್ಪೇ ಅಥವಾ ಹೊಂಗೆ ಬೀಜ ಮತ್ತು ಅಡಿಗೆ ಉಪ್ಪನ್ನು ಅರೆದು ಗಾಯಗಳಿಗೆ ಹೆಚ್ಚುವುದರಿಂದ ಗಾಯ ಬಹುಬೇಗ ಗುಣವಾಗುವುದು.ಚೇಳು ಕುಟುಕಿದ ಜಾಗಕ್ಕೆ ಬೆಳ್ಳುಳ್ಳಿ ಎಸಳನ್ನು ಅರೆದು ಹಚ್ಚದರೆ ಯಾತನೆ ದೂರವಾಗುವುದು.ಜೇನುತುಪ್ಪದೊಂದಿಗೆ ಬೆಳ್ಳುಳ್ಳಿ ರಸವನ್ನು ಒಂದು ಟೀ ಚಮಚದಷ್ಟು ಸೇವಿಸುವುದರಿಂದ ಜಂತುಹುಳುಗಳು ಮಲದೊಂದಿಗೆ ಹೊರಬೀಳುವುವು.ಕಿವಿ ನೋವಿದ್ದರೆ ಬೆಳ್ಳುಳ್ಳಿಯ ಎಸಳನ್ನು ಹರಳೆಣ್ಣೆಯಲ್ಲಿ ಕರಿದು ನಂತರ ಆರಿದ ಮೇಲೆ ಕಿವಿಗೆ ಒಂದೆರಡು ತೊಟ್ಟು ಆ ಎಣ್ಣೆಯನ್ನು ಬಿಟ್ಟುಕೊಂದರೆ ನೋವು ಪರಿಹಾರವಗುವುದು.ಬೆಳ್ಳುಳ್ಳಿ ಸೇವನೆಯಿಂದ ವಾತನಾಶವಾಗುತ್ತದೆ. ಕ್ಷಯರೋಗವನ್ನು ನಿವಾರಿಸುತ್ತದೆ. ಕಾಲರಾಕ್ಕೆ ಇದರ ಸೇವನೆಯಿಂದ ಹೆಚ್ಚು ಉಪಯೋಗವಾಗುತ್ತದೆ.ಹಾಲಿನಲ್ಲಿ ಬೆಳ್ಳುಳ್ಳಿ ಎಸಳನ್ನು ಬೇಯಿಸಿ ಪ್ರತಿದಿನ ತಿನ್ನುವುದರಿಂದ ಉಬ್ಬಸ ರೋಗ ಗುಣವಾಗುತ್ತದೆ.ಬಾಣಂತಿಯರು ಬೆಳ್ಳುಳ್ಳಿಯ ಚೂರುಗಳನ್ನು ಹತ್ತಿಯಲ್ಲಿ ಸುತ್ತಿ ಇಟ್ಟುಕೊಂಡರೆ ಶೀತದಿಂದ ಕಿವಿ ಕಿವುಡಾಗುಗ ಸಾಧ್ಯತೆ ಇರುವುದಿಲ್ಲ.ಬೆಳ್ಳುಳ್ಳಿಯನ್ನು ಬೇಯಿಸಿ ಅದರ ನೀರನ್ನು ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಗರ್ಭಾಶಯದ ನೋವು ಪರಿಹಾರವಾಗುವುದು.ಪ್ರತಿನಿತ್ಯ ಬೆಳ್ಳುಳ್ಳಿಯನ್ನು ಬಳಸುತ್ತಿದ್ದರೆ ಜಠರದಲ್ಲಿ ವಾಯು ಸೇರುವುದಿಲ್ಲ ಜೊತೆಗೆ ರಕ್ತದ ವೃದ್ಧಿಯಾಗುತ್ತದೆ.ಬೆಳ್ಳುಳ್ಳಿ ಹೊಟ್ಟಿನ ಹೊಗೆಯನ್ನು ಮನೆಯಲ್ಲಿ ಕೆಲವು ಗಂಟೆಗಳು ಹಾಕುವುದರಿಂದ ಮನೆಯಲ್ಲಿ ಒಂದು ವೇಳೆ ವಿಷಜಂತುಗಳು ಸೇರಿಕೊಂಡಿದ್ದರೆ ಅವು ಅದರ ವಾಸನೆಯನ್ನು ತಡೆಯಲಾರದೆ ಹೊರಗೆ ಹೊರಟು ಹೋಗುವುವು.ದೀರ್ಘಕಾಲದ ಕೆಮ್ಮು ಮತ್ತು ನೆಗಡಡಯಿಂದ ಬಳಲುತ್ತಿರುವವರು ಬೆಳ್ಳುಳ್ಳಿಯನ್ನು ಪ್ರತಿದಿನ ಬಳಸಿದರೆ ಖಾಯಿಲೆ ದೂರವಾಗುವುದು.ಬಿಸಿ ಮಾಡಿದ ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಅಜೀರ್ಣ ಮತ್ತು ಹೊಟ್ಟೆ ಉಬ್ಬರ ದೂರವಾಗುವುದು.ಬೆಳ್ಳುಳ್ಳಿಯನ್ನು ಪ್ರತಿನಿತ್ಯವೂ ಬಳಸುವುದರಿಂದ ಪಚನಶಕ್ತಿ ಹೆಚ್ಚಿಸಿ ವೀರ್ಯವನ್ನು ವೃದ್ಧಿಸುತ್ತದೆ. ಇದರಿಂದ ದಮ್ಮು, ಕೆಮ್ಮು ಉಬ್ಬಸದ ವಿಕಾರಗಳಿಗೆ ಅತ್ಯುತ್ತಮ ಔಷಧವಾಗಿದೆ.ಬೆಳ್ಳುಳ್ಳಿಯನ್ನು ಬಳಸುವುದರಿಂದ ಜ್ವರ ಬಂದಾಗ ಪ್ಲೇಟ್ ಲೇಟ್ ಗಳು ಕಡಿಮೆ ಇರುವುದನ್ನು ಹೆಚ್ಚು ಮಾಡುತ್ತದೆ.ಬೆಳ್ಳುಳ್ಳಿಯು ಇನ್ಸುಲಿನ್ ಬಿಡುಗಡೆ ಹೆಚ್ಚಿಸಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿ ಇರುತ್ತದೆ.ಹಲ್ಲು ನೋವು ಇದಲ್ಲಿ ಬೆಳ್ಳುಳ್ಳಿಯ ಸಣ್ಣ ಚೂರು ಇಡುವುದರಿಂದ ನೋವು ಕಡಿಮೆಯಾಗುತ್ತದೆ.ಬೆನ್ನು ನೋವಿದ್ದರೆ ಬೆಳ್ಳುಳ್ಳಿ ರಸ ಹೆಚ್ಚುವುದರಿಂದ ನೋವು ಕಡಿಮೆ ಆಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos