ಬೆಳ್ಳುಳಿ ಬೆಲೆಯಲ್ಲಿ ಭಾರಿ ಏರಿಕೆ

ಬೆಳ್ಳುಳಿ ಬೆಲೆಯಲ್ಲಿ ಭಾರಿ ಏರಿಕೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ದಿನನಿತ್ಯ ಬಳಸುವಂತಹ ಪದಾರ್ಥಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡಿದ್ದು. ಜನಸಾಮಾನ್ಯರು ಬೆಲೆ ಏರಿಕೆಯಿಂದ ಕಂಗಲಾಗಿದ್ದಾರೆ. ನಾವು ದಿನನಿತ್ಯ ಆಹಾರದಲ್ಲಿ ಹೆಚ್ಚಾಗಿ ಬಳಸುವುದು ಬೆಳ್ಳುಳಿ.

ಬೆಲೆ ಏರಿಕೆಯಿಂದ ತತ್ತರಿಸುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕ್ ತಟ್ಟಿದೆ. ಬೆಳ್ಳುಳ್ಳಿ ಬೆಲೆ ಏರಿಕೆ ಬಿಸಿ ತಟ್ಟಿದೆ. ಬೆಳ್ಳುಳ್ಳಿ ಕೆಜಿಗೆ  400 ರಿಂದ 500ರೂ ತಲುಪಿದೆ. ಕಳೆದ ವಾರವಷ್ಟೇ. ಬೆಳ್ಳುಳ್ಳಿ ಕೆಜಿಗೆ  200ರಿಂದ 300 ಇದ್ದ ಬೆಳ್ಳುಳ್ಳಿ ಧೀಡಿರನೆ ಏರಿಕೆಯಾಗಿದೆ.

ಸದ್ಯಕ್ಕೆ ಬೆಳ್ಳುಳ್ಳಿ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಮುಂದಿನ ಫೆಬ್ರವರಿ  ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.  ಕಳೆದ ಎರಡು ತಿಂಗಳಿಂದ ಏರು ಗತಿಯಲ್ಲೇ ಇರುವ ಬೆಳ್ಳುಳ್ಳಿ ದರ ಈಗ 1 ಕೆಜಿಗೆ 400 ರಿಂದ 500 ವರೆಗೆ ಮುಟ್ಟಿದೆ.

ಟೊಮೇಟೊ, ಈರುಳ್ಳಿ ಬೆಲೆ ನಿಯಂತ್ರಣಕ್ಕೆ ಬಂದ ಬೆನ್ನಲೇ ಬೆಳ್ಳುಳ್ಳಿ ಬೆಲೆಯಲ್ಲಿ ಏರಿಕೆ ಆಗಿರುವುದು ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos