ಗರ್ಭಿಣಿಯರಿಗೆ ಕಾಡುವ ಸಮಸ್ಯೆಗಳಿಗೆ ಪರಿಹಾರ

ಗರ್ಭಿಣಿಯರಿಗೆ ಕಾಡುವ ಸಮಸ್ಯೆಗಳಿಗೆ ಪರಿಹಾರ

ಪ್ರಗ್ನೆನ್ಸಿ ಸಮಯದಲ್ಲಿ ಹೆಚ್ಚಿನ ಮಹಿಳೆಯರಲ್ಲಿ ತಲೆನೋವು ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇದು ಮಾನಸಿಕವಾಗಿ ತುಂಬಾ ಹಿಂಸೆ ನೀಡುತ್ತದೆ, ಈ ರೀತಿಯ ತಲೆನೋವಿನ ಕಾರಣಕ್ಕೆ ಸಿಟ್ಟು, ಕಿರಿಕಿರಿ ಉಂಟಾಗುತ್ತದೆ.

ಗರ್ಭಿಣಿಯರಿಗೆ ಈ ರೀತಿ ತಲೆನೋವು ಕಾಡಲು ಕಾರಣವೇನು? ಅದಕ್ಕೆ ಪರಿಹಾರವೇನು? ಇಲ್ಲಿದೆ ನೋಡಿ

ಹಾರ್ಮೋನ್​ ಬದಲಾವಣೆ: ಗರ್ಭಿಣಿಯಾದ ಸಮಯದಲ್ಲಿ ಹಾರ್ಮೋನ್​ ಪ್ರಮಾಣ ಹೆಚ್ಚುತ್ತದೆ. ಇದರಿಂದ ದೇಹದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಹಾಗಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. 
ಇದಕ್ಕಾಗಿ ಕುತ್ತಿಗೆ ಸುತ್ತ, ಭುಜಕ್ಕೆ ಲೈಟ್​ ಆಗಿ ಮಸಾಜ್​ ಮಾಡಿ. ದೀರ್ಘ ಉಸಿರಾಟದ ಯೋಗ ಕೂಡ ಮಾಡಬಹುದು. ಈ ರೀತಿಯ ತಲೆನೋವು ಮೂರು ತಿಂಗಳ ಕೊನೆಯಲ್ಲಿ ಕಾಣಿಸಿಕೊಳ್ಳುತ್ತದೆ.
ರಕ್ತದ ಪ್ರಮಾಣ ಹೆಚ್ಚುತ್ತದೆ: ಪ್ರಗ್ನೆನ್ಸಿ ಸಮಯದಲ್ಲಿ ರಕ್ತದ ವಾಲ್ಯೂಮ್​ ಹೆಚ್ಚುತ್ತದೆ. ಪ್ಲಾಸ್ಮಾ, ಕೆಂಪು ರಕ್ತಕಣಗಳು ಹಾಗೆ ಪ್ರೊಟೀನ್​ ಮಟ್ಟದಲ್ಲಿ ಏರಿಕೆಯಾಗುತ್ತದೆ. ಹೀಗಾಗಿ ದೇಹ ಈ ಬದಲಾವಣೆಗೆ ಅಡ್ಜೆಸ್ಟ್​ ಆಗುವ ಸಂದರ್ಭದಲ್ಲಿ ತಲೆ ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ತಲೆನೊವು ಗರ್ಭಿಣಿಯಾದ ಮೊದಲ ತಿಂಗಳಿನಲ್ಲಿ ಅಥವಾ ಮೂರನೇ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತದೆ. 
ರಕ್ತದಲ್ಲಿ ಸಕ್ಕರೆ ಪ್ರಮಾಣ: ಪ್ರಗ್ನೆನ್ಸಿ ಸಮಯದಲ್ಲಿ ಉಂಟಾಗುವ ವಾಕರಿಗೆ, ತಲೆಸುತ್ತು, ಹಾರ್ಮೋನ್​ಗಳಲ್ಲಿ ಬದಲಾವಣೆ, ಇವು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಆರೋಗ್ಯಕರ ಬೆಳೆ ಕಾಳು, ಪ್ರೊಟೀನ್​, ಕಾರ್ಬೋಹೈಡ್ರೇಟ್​ ಆಹಾರ ಹಾಗೆ ತರಕಾರಿಗಳನ್ನು ಸೇರಿಸಿಕೊಳ್ಳಿ. ಈ ಕಾರಣಕ್ಕೆ ಬರುವ ತಲೆನೋವು ಪ್ರಗ್ನೆನ್ಸಿಯಲ್ಲಿ ಸಾಮಾನ್ಯ.
ಸೈನಸ್​ ಅಥವಾ ಮೂಗು ಕಟ್ಟುವುದು: ಸೈನಸ್​ ಒತ್ತಡ, ಮೂಗು ಕಟ್ಟುವುದರಿಂದ ಕೂಡ ತಲೆ ನೋವು ಕಾಣಿಸಿಕೊಳ್ಳುತ್ತದೆ. ಇದರಿಂದ ಕುತ್ತಿಗೆ, ಕಿವಿ ಸಮೀಪ ಕೂಡ ನೋವು ಕಾಣಿಸಿಕೊಳ್ಳಬಹುದು. ಸೈನಸ್​ ಸಮಸ್ಯೆ ಮುಂದೆ ಮೈಗ್ರೇನ್​ ಕೂಡ ಆರಂಭವಾಗುವ ಸಾಧ್ಯತೆ ಇರುವುದರಿಂದ ಇದಕ್ಕೆ ಬೇಗ ಪರಿಹಾರ ಕಂಡುಕೊಳ್ಳುವುದು ಉತ್ತಮ. ಹಾಗಾಗಿ ವಿಟಮಿನ್​ ಸಿ ಅಂಶವಿರುವ ಆಹಾರವನ್ನು ಹೆಚ್ಚು ಸೇವಿಸಿ.
ನಿರ್ಜಲೀಕರಣ: ಪ್ರಗ್ನೆನ್ಸಿ ಸಮಯದಲ್ಲಿ ಹೆಚ್ಚು ನೀರು ಸೇವನೆ ಅಗತ್ಯ. ಪದೇ ಪದೇ ವಾಂತಿಯಾಗುವುದು, ಸುಸ್ತು, ಆಹಾರ ಸೇವಿಸಲು ಬಾಯಿ ರುಚಿ ಇಲ್ಲದಿರುವುದು ಇವೆಲ್ಲವೂ ಡಿಹೈಡ್ರೇಶನ್​ಗೆ ಕಾರಣವಾಗುತ್ತವೆ. ಇದರಿಂದ ತಲೆ ನೋವು ಆರಂಭವಾಗುವುದು ಖಚಿತ. ಆದ್ದರಿಂದ ನೀರಿನಾಂಶ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಿ. ಎಂದಿಗೂ ಒಂದು ವಾಟರ್​ ಬಾಟಲ್​ ನಿಮ್ಮ ಜೊತೆ ಇರಲಿ.

ಮಸಲ್ಸ್​ಗಳಲ್ಲಿ ನೋವು: ಪ್ರಗ್ನೆನ್ಸಿ ಸಮಯದಲ್ಲಿ ಮಾಂಶಖಂಡಗಳು ಹಿಗ್ಗುತ್ತವೆ. ಹಾಗಾಗಿ ನೋವು ಕಾಣಿಸಿಕೊಳ್ಳುವುದು ಸಾಮಾನ್ಯವಾಗುತ್ತವೆ. ಇದರಿಂದ ಸುಸ್ತು, ಅಶಕ್ತತೆ, ಹಾಗೆ ತಲೆನೋವು ಕೂಡ ಕಾಣಿಸಿಕೊಳ್ಳುತ್ತದೆ. ಈ ಕಾರಣಕ್ಕೆ ತಲೆನೋವು ಬಂದಾಗ, ಬೆಚ್ಚಗಿನ ನೀರಿನಿಂದ ಸ್ನಾನ ಮಾಡಿ. ನಿಮಗೆ ರಿಲ್ಯಾಕ್ಸ್​ ಸಿಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos