ಗರ್ಭಿಣಿಯಾದ ಮೇಲೆ ಮದುವೆಗೆ ರೆಡಿಯಾದ್ರು ನಾಯಕಿ.

ಗರ್ಭಿಣಿಯಾದ ಮೇಲೆ ಮದುವೆಗೆ ರೆಡಿಯಾದ್ರು ನಾಯಕಿ.

ಬೆಂಗಳೂರು, ಏ. 10, ನ್ಯೂಸ್ ಎಕ್ಸ್ ಪ್ರೆಸ್: ‘ದಿ ವಿಲನ್’ ಚಿತ್ರದ ನಾಯಕಿ ಆ್ಯಮಿ ಜಾಕ್ಸನ್ ಹಸೆಮಣೆಗೆ ಏರಲು ಸಿದ್ಧರಾಗಿದ್ದಾರೆ. ಅಷ್ಟಕ್ಕೂ ಇದರಲ್ಲಿ ವಿಶೇಷತೆ ಏನಪ್ಪಾ ಅಂದರೆ, ಮೊದಲು ತಾಯ್ತನದ ಖುಷಿಯನ್ನು ಅನುಭವಿಸಿದ ನಂತರ ಹಸೆಮಣೆಗೆ ಏರುತ್ತಿರುವ ನಾಯಕಿ ಇವರು.

ಆ್ಯಮಿ ಜಾಕ್ಸನ್ ಕನ್ನಡದ ದಿ ವಿಲನ್ ಚಿತ್ರದಲ್ಲಿ  ನಟಿಸಿ ಬಹಳ ಹೆಸರಾದವರು. ಮಾಡಿದ್ದು ಒಂದೇ ಚಿತ್ರವಾದರು ದಿ ವಿಲನ್ ಅಬ್ಬರಕ್ಕೆ ಇನ್ನು ಕನ್ನಡಿಗರ ಮನದಲ್ಲುಳಿದಿದ್ದಾರೆ ಆ್ಯಮಿ ಜಾಕ್ಸನ್.

ಮೇ 5 ರಂದು ತಮ್ಮ ಪ್ರಿಯಕರ ಜಾರ್ಜ್ ಪೆನಯಿಟ್ಟೊ ಜತೆ ವಿವಾಹ ಜೀವನಕ್ಕೆ ಕಾಲಿಡಲಿದ್ದಾರೆ. ಲವ್, ಡೇಟಿಂಗ್ ಅಂತಾ ಸುತ್ತಾಡುತ್ತಿದ್ದ ಆ್ಯಮಿ ಜಾಕ್ಸನ್ ಸದ್ಯ ಮದುವೆ ಯೋಚನೆ ಮಾಡಿದ್ದಾರಂತೆ. 2 ವರ್ಷಗಳಿಂದ ಡೇಟಿಂಗ್ ಅಂತ ಸುತ್ತಾಡುತ್ತಿದ್ದ ಜೋಡಿ ಇದೀಗ ವಿವಾಹ ಬಂಧನಕ್ಕೆ ಒಳಗಾಗುತ್ತಿದೆ. ಜಾರ್ಜ್ ಜೊತೆ ಡೇಟಿಂಗ್ ನಲ್ಲಿದ್ದ  ಆ್ಯಮಿ  ಸದ್ಯ ಗರ್ಭಿಣಿ. ಮದುವೆಗೂ ಮುನ್ನವೇ ಗರ್ಭಿಣಿಯಾದ ಹೀರೋಯಿನ್ ಅಂತಾನೂ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದರು.

ತಾನು ಮದುವೆಯಾಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ತಾನು ಗರ್ಭಿಣಿ ಆದ ವಿಷಯವನ್ನು ಕೂಡ ಅವರೇ ಹೇಳಿ ನನಗೆ ಈ ಅನುಭವ ಹೊಸದು, ತುಂಬಾ ಖುಷಿ ಕೊಡುತ್ತಿದೆ ಎಂದು ಬರೆದುಕೊಂಡಿದ್ದರು. ಲಂಡನ್ ನಲ್ಲಿ ಈ ಜೋಡಿಯ ನಿಶ್ಚಿತಾರ್ಥ, ವಿವಾಹ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿದೆ ಎಂದು ತಿಳಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos