ಗಾಂಧೀ ಕಣ್ಣುಗಳಿಗೆ ಕೆಂಪು ದೀಪ

ಗಾಂಧೀ ಕಣ್ಣುಗಳಿಗೆ ಕೆಂಪು ದೀಪ

ಸ್ಯಾನ್ಫ್ರಾನ್ಸಿಸ್ಕೋ, ಆ. 11 :  ವ್ಯಕ್ತಿಯೊಬ್ಬ ಗಾಂಧಿ ಪ್ರತಿಮೆ ಕಣ್ಣುಗಳಿಂದ ಕೆಂಪು ಬೆಳಕು ಹೊರಸೂಸುತ್ತಿರುವ ಫೋಟೋ ಪ್ರಕಟಿಸಿದ್ದಾನೆ. ಕನ್ನಡಕಗಳಿಗೆ ಯಾರೋ ಎಲ್ಇಡಿ ಬಲ್ಬ್ಗಳನ್ನು ಅಳವಡಿಸಿಬಿಟ್ಟಿದ್ದಾರೆ. ಗಾಂಧಿ ಕಣ್ಣುಗಳು ಕೆಂಡಕಾರುತ್ತಿರುವಂತೆ ಕಾಣಿಸುತ್ತಿದ್ದವು. ಕೆಲವರು ಸ್ವಾಗತಿಸಿದರೆ, ಇನ್ನೂ ಕೆಲವರು ಇದು ಗಾಂಧೀಜಿಗೆ ಮಾಡಿದ ಅವಮಾನ ಎಂದು ಕಿಡಿಕಾರಿದ್ದಾರೆ.
ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬೇ ಬ್ರಿಡ್ಜ್ಗೆ ಮುಖ ಮಾಡಿರುವ ಮಹಾತ್ಮ ಗಾಂಧಿ ಪ್ರತಿಮೆಯ ಕಣ್ಣುಗಳು ಕೆಂಪು ಬೆಳಕನ್ನು ಸೂಸುವ ಮೂಲಕ ಅಚ್ಚರಿ ಮೂಡಿಸಿದೆ. 1988ರಲ್ಲಿ ಸ್ಥಾಪಿಸಿದ ಕಂಚಿನ ಪ್ರತಿಮೆ ಹಲವು ಬಾರಿ ಇಂಥ ವಿಚಿತ್ರ ಸನ್ನಿವೇಶಗಳನ್ನು ಎದುರಿಸಿದೆ. ಈ ಪ್ರತಿಮೆಯ ಕನ್ನಡಕ ಕಾಣೆಯಾಗುವುದೇನೂ ಹೊಸತೂ ಅಲ್ಲ. ಹೀಗಾಗಿ ಅಲ್ಲಿನ ಆಡಳಿತ ಹೆಚ್ಚುವರಿ ಕನ್ನಡಕವನ್ನು ಮೊದಲೇ ತಂದು ಸಂಗ್ರಹಿಸಿಟ್ಟುಕೊಳ್ಳುತ್ತದೆಯಂತೆ.
ನಂತರ ಈ ಫೋಟೋಗಳು ಫೇಸ್ಬುಕ್, ಟ್ವಿಟರ್, ಇತರೆ ಸಾಮಾಜಿಕ ತಾಣಗಳಲ್ಲೂ ಹರಿದಾಡಿದವು.

ಫ್ರೆಶ್ ನ್ಯೂಸ್

Latest Posts

Featured Videos