ಗಡಿಪ್ರದೇಶ ಪಾವಗಡದಲ್ಲಿ ರಾಜಾರೋಷವಾಗಿ ಇಸ್ಟೀಟ್ ದಂಧೆ..!

ಗಡಿಪ್ರದೇಶ ಪಾವಗಡದಲ್ಲಿ ರಾಜಾರೋಷವಾಗಿ ಇಸ್ಟೀಟ್ ದಂಧೆ..!

ತುಮಕೂರು, ಮೇ.2, ನ್ಯೂಸ್ ಎಕ್ಸ್ ಪ್ರೆಸ್: ಹೊರ ರಾಜ್ಯದಿಂದ ಬಂದು ಲಕ್ಷ ಲಕ್ಷ ಹಣವನ್ನ ಇಸ್ಪೀಟ್ ದಂಧೆಯಲ್ಲಿ ತೊಡಗಿಸಿ ಆಟ ಆಡುತ್ತಿರುವುದು ವಿಡಿಯೋ ಮೂಲಕ ಬಹಿರಂಗಗೊಂಡಿದೆ. ರಾಜ್ಯದ ಗಡಿ ಭಾಗವಾದ ಪಾವಗಡದಲ್ಲಿ ಮರಳು, ಇಸ್ಪೀಟ್ ದಂಧೆಗಳು ವ್ಯಾಪಕವಾಗಿ ನಡೆಯುತ್ತಿರುದಕ್ಕೆ ಮೂಲ ಕಾರಣ ನೆರೆ ರಾಜ್ಯದ ಆಂಧ್ರಪ್ರದೇಶದಿಂದ ಹಲವರು ಬಂದು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. ಪಾವಗಡದಲ್ಲಿ ನಡೆಯುತ್ತಿರುವ ಈ ದಂಧೆಗೆ ಬೆಟ್ಟಿಂಗ್ ಕಟ್ಟೋದು ಬರೋಬರಿ ಲಕ್ಷ ಲಕ್ಷ…. ಯಾರ ಕಡಿವಾಣವಿಲ್ಲದೇ ಲಕ್ಷ ಲಕ್ಷ ಬೆಟ್ಟಿಂಗ್ ಕಟ್ತಾರೆ. ಆಂಧ್ರ, ಬೆಂಗಳೂರು, ತುಮಕೂರು, ಮಧುಗಿರಿ ಸೇರಿದಂತೆ ಇತರ ಕಡೆಯಿಂದ ಬೈಕ್‍ಗಳಲ್ಲಿ ಜೂಜುಕೋರರು ಆಗಮಿಸುತ್ತಾರೆ. ಬೆಳಿಗ್ಗೆ 9 ರಿಂದ 1ರವರೆಗೆ , ಮತ್ತೆ 2 ರಿಂದ 6ರವರೆಗೆ ಹೀಗೆ ಎರಡು ಶಿಫ್ಟ್‍ಗಳಲ್ಲಿ ಜೂಜಾಟ ನಡೆಯುತ್ತವೆ.  ಈ ದಂಧೆಯ ಕಿಂಗ್‍ಪಿನ್‍ಗಳು ಸೇರಿದಂತೆ ಇಲ್ಲಿ ಆಟ ಆಡಲು ಬರುವವರಿಗೆ ಪೊಲೀಸರ ಭಯವೇ ಇಲ್ಲ. ಹಾಗಾಗಿ ರಾಜಾರೋಷವಾಗಿ ಇಸ್ಪೀಟ್ ದಂಧೆ ಯಲ್ಲಿ ತೊಡಗಿಕೊಳ್ಳುತ್ತಾರೆ. ಪಾವಗಡ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಂಧೆ ನಡೆಯುತ್ತಿದ್ದು, ಕೇವಲ ಇದೊಂದು ಜಾಗದಲ್ಲಿ ಅಲ್ಲ ಪಾವಗಡ ತಾಲೂಕಿನ ಬಹುತೇಕ ಕಡೆ ಬೆಟ್ಟದ ಸಾಲುಗಳಲ್ಲಿ ನಿರಂತರವಾಗಿ ನಡೆಯುತ್ತಿವೆ. ಕೆಲವರಿಗೆ ಇದೊಂದು ಉದ್ಯೋಗವಾಗಿ ಪರಿಣಮಿಸಿದೆ. ತುಮಕೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಬೃಹತ್ ಇಸ್ಪೀಟ್ ದಂಧೆಗೆ ಇನ್ನಾದರೂ ಪೊಲೀಸ್ ಇಲಾಖೆ ಕಡಿವಾಣ ಹಾಕುವುದೇ ಎಂಬುದನ್ನು ಕಾದುನೋಡಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos