ಗಾಂಜಾ ಆರೋಪಿಗಳ ಸೆರೆ!

ಗಾಂಜಾ ಆರೋಪಿಗಳ ಸೆರೆ!

ಬೆಂಗಳೂರು, ಆ. 30: ಗಾಂಜಾ ಮಾರಾಟ ಮಾಡುತ್ತಿದ್ದ 5 ಜನ ಆರೋಪಿಗಳನ್ನುಇಂದು ಆಗ್ನೇಯ ವಿಭಾಗದ ಪೋಲಿಸರು ಬಂಧಿಸಿ 10 ಕೆಜಿ 300 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ತಿಲಕ್ ನಗರ ಪೋಲಿಸರು ಜಯನಗರದ ಎಸ್ ಆರ್ ಕೆ ಗಾರ್ಡನ್ ವಾಸಿ ಮೊಹಮದ್ ಜೈನ್, ಮಡಿವಾಳದ ರೋಹಿತ್ ರಾಥೋಡ್, ರಾಮನಗರ ಐಜೂರಿನ ಇರ್ಷದ್ ಮೆಹಬೂಬ್ ನಗರದ ಜಾಬೀರ್ ಪಾಷ ರನ್ನು ಬಂಧಿಸಿದ್ದಾರೆ. ಬಂಧಿತರಿಂದ 5 ಕೆಜಿ 200 ಗ್ರಾಂ ಗಾಂಜಾ ಸೇರಿ ಒಂದು ಲಕ್ಷ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿರುರುವುದಾಗಿ ಡಿಸಿಪಿ ಇಷಾಪಂತ್ ತಿಳಿಸಿದ್ದಾರೆ.

ಆರೋಪಿಗಳಾದ ಮೊಹಮದ್ ಜೈನ್ ಹಾಗೂ ರೋಹಿತ್ ಇನ್ನಿಬ್ಬರು ಆರೋಪಿಗಳಾದ ಇರ್ಷಾದ್, ಬಾಬಿರ್ ನಿಂದ ಗಾಂಜಾ ತರಿಸಿಕೊಂಡು ಕೋರಮಂಗಲ, ತಿಲಕ್ ನಗರ, ಜಯನಗರ ಇತರ ಪ್ರತಿಷ್ಟಿತ  ಇಂಜಿನಿಯರಿಂಗ್ ಮತ್ತು ವೃತ್ತಿಪರ ಕಾಲೇಜುಗಳ  ಬಳಿ ವಿದ್ಯಾರ್ಥಿಗಳಿಗೆ ಹಾಗೂ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು. ಜಯನಗರದ ಜೈನ್ ಕಾಲೇಜು ಬಳಿ ಆರೋಪಿಗಳು ಗಾಂಜಾ ಮಾರಾಟ ಮಾಡಲು ಯತ್ನಿಸಿದ ವೇಳೆ ಪೋಲಿಸರು ಬಂಧಿಸಿದ್ದಾರೆ.

ಹೊಂಗಸಂದ್ರ ಓಣಿ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ  ತಮಿಳು ನಾಡು ಮೂಲದ ಜೋನಪ್ಪ ನನ್ನು ಬಂಧಿಸಿ ಮೂರು ಲಕ್ಷ ಮೌಲ್ಯದ 5 ಕೆಜಿ  122 ಗ್ರಾಂ  ಗಾಂಜಾವನ್ನು ಬೊಮ್ಮನಹಳ್ಳಿ ಪೋಲಿಸರು ಬಂಧಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos