ಗಾಂಧಿನಗರ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಸಲಾಗ್ರಹ

ಗಾಂಧಿನಗರ ರಸ್ತೆ ದುರಸ್ತಿ ಕಾಮಗಾರಿ ಪೂರ್ಣಗೊಳಸಲಾಗ್ರಹ

ಬೆಂಗಳೂರು, ಜು. 9 :  ಬೆಂಗಳೂರು ನಗರದ ಕೆಂಪೇಗೌಡ ನಿಲ್ದಾಣಕ್ಕೆ ಹೊಂದಿಕೊಂಡಿರುವ ಗಾಂಧಿನಗರ ಅತ್ಯಂತ ವಾಣಿಜ್ಯ ವಹಿಟು ನಡೆಯೋ ಪ್ರಮುಖ ಕೇಂದ್ರ ಸ್ಥಾನವಾಗಿದೆ.

ಪ್ರಮುಖ ಸರ್ಕಾರಿ ಆಡಳಿತ ಕಛೇರಿಗಳ ಮುಖ್ಯಸ್ಥರನ್ನ ಭೇಟಿ ಮಾಡಲು ಮತ್ತು ವಿಧಾನಸೌಧ, ಬಹುಮಹಡಿ ಕಟ್ಟಡ, ಲೋಕೋಪಯೋಗಿ ಜಿಲ್ಲಾ ಪಂಚಾಯತ್ ಕೆ ಆರ್ ಸರ್ಕಲ್ ನಲ್ಲಿರೊ ಜಲಮಂಡಳಿ,  ಕೆಪಿಎಸ್ ಸಿ, ವಿಕಾಸ ಸೌದ, ಶಿಕ್ಷಣ ಆಯುಕ್ತರ ಕಛೇರಿ,  ಹೈಕೋರ್ಟ್ ಸೇರಿಂದಂತೆ ಪ್ರಮುಖ ಆಡಳಿತ ಕಛೇರಿಗಳನ್ನ ತನ್ನ ಸುತ್ತ ಹಣೆದು ಕೊಂಡಿರುವ ಗಾಂಧಿನಗರದ ರಸ್ತೆಗಳು ತನ್ನ ಅಂದ ಕಳೆದು ಕೊಂಡಿದೆ. ಹೌದು, ಇಲ್ಲಿ ಓಡಾಡಲಿಕೆ ಅಸಾದ್ಯ ಎನ್ನುವಷ್ಟರ ಮಟ್ಟಿಗೆ ದೂಳು ಮುಗಿಲು ಮಟ್ಟುತ್ತಿರುತ್ತದೆ.

ಇಲ್ಲಿ ಕಳೆದ ಆರು ತಿಂಗಳಿಂದ ಯುಜಿಡಿ ದುರಸ್ಥಿ ಕುಡಿಯುವ ನೀರು ಪೂರೈಕೆ ಮಾಡಲು ಪೈಪ್ ಲೈನ್ ಅಳವಡಿಕೆ ಮಾಡಲು ಹಾಗು ರಸ್ತೆಯನ್ನ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸುವ ಉದ್ದೇಶದಿಂದ ರಸ್ತೆ ಅಗೆದು ಸಾರ್ವಜನಿಕ ಸಾರಿಗೆ ಹಾಗು ಪಾದಚಾರಿಗಳು ಸೇರಿದಂತೆ, ಇಲ್ಲಿನ ಫುಟ್ ಪಾತ್ ವ್ಯಾಪಾರಿಗಳು ಸೇರಿದಂತೆ ಎಲ್ಲಾರೀತಿಯ ವ್ಯಹಾರ ಇತ್ತೀಚೆ ಕಡಿಮೆಯಾಗಿದೆ ಎನ್ನುತ್ತಾರೆ ಮಾರ್ವಾಡಿ ಮೋತಿಲಾಲ್ ರವರು.

ಪ್ರಮುಖವಾಗಿ ಇಲ್ಲಿನ ಕಪಾಲಿ ರಸ್ತೆ, ಕೆಆರ್ ಸರ್ಕಲ್ ಗೆ ಸೇರುವ ರಸ್ತೆ, ಗಾಂದಿನಗರದಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಸುರಂಗ ಮಾರ್ಗದ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ದುರಸ್ತಿಗಾಗಿ ಕಿತ್ತು ಹಾಕಿ ಸಂಚಾರಿಗಳಿಗೆ ತೀರ್ವ ತೊಂದರೆ ಆಗಿದೆ. ಗಾಂಧಿನಗರದ ಮುಖ್ಯ ರಸ್ತೆ ಯಿಂದ ಕುರುಬರ ಸಂಘದ ಮಾರ್ಗದ ರಸ್ತೆ ಇಲ್ಲಿ ಕೆಲ ರಸ್ತೆಗಳು ಈಗಾಗಲೇ ಸಿಸಿ ರಸ್ತೆ ನಿರ್ಮಾಣ ಆಗಿದ್ದು, ಪ್ರಮುಖ ರಸ್ತೆಗಳು ದುರಸ್ತಿ ಆಗಬೇಕು ಎಂದು ಕುರುಬರ ಸಂಘದ ಸದಸ್ಯ ಲಕ್ಷಿನಾರಾಯಣರಾಜು ಎಂಬುವರು ಹೇಳಿಕೆ ನೀಡಿ, ಇನ್ನು ಕಾಮಗಾರಿಗಳು ತ್ವರಿತವಾಗಿ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೂ ಗಾಂಧಿನಗಕ್ಕೆ ಹೊಂದಿಕೊಂಡಿ ಕಾವೇರಿ ಅಥಿತಿ ಗೃಹದ ಪಕ್ಕದ ರಸ್ತೆಯಲ್ಲಿ ರಾಶಿಗಟ್ಟಲೆ ಮಣ್ಣಿದ್ದರೂ ತೆರವುಗೊಳಿಸಿಲ್ಲ.

ಸೆಂಟ್ರಲ್ ಕಾಲೇಜು ಹಾಗು ಕಾವೇರಿ ಅತಿಥಿ ಗೃಹದ ಮದ್ಯ ಹಾದು ಹೋಗುವ ರಸ್ತೆಯ ಎರಡು ಬದಿಯಲ್ಲಿ ಕೇಬಲ್ ಹಾಗು ಸ್ಯಾನಿಟರಿ ಕೊಳಾಯಿ ಪೈಪ್ ಲೈನ್ ಅಳವಡಿಸಲು ತೆಗೆದಿರುವ ಚರಂಡಿ ಸರಿಯಾಗಿ ಮಚಿಲ್ಲ, ಅಲ್ಲಲ್ಲಿ ನಿರ್ಮಿಸಿರುವ ಮ್ಯಾನ್ ಹೋಲ್ ಮುಚ್ಚದೆ ನಿರ್ಲಕ್ಷ್ಯ ಮಾಡಡಿ ಕಬ್ಬಿಣದ ರಾಡುಗಳನ್ನ ಕಟ್ ಮಾಡದೆ ಬಿಟ್ಟು, ರಾತ್ರಿ ವೇಳೆ ಸಂಚರಿಸುವ ಪಾದಚಾರಿಗಳ ಬಲಿಗಾಗಿ ಕಾದು ನಿಂತಿವೆ.

ಆಮೆಗತಿಯಲ್ಲಿ ಸಾಗುತ್ತಿರುವ ಗಾಂಧಿನಗರ ರಸ್ತೆಗಳ ದುರಸ್ತಿ ಕಾರ್ಯ ಶೀಘ್ರವಾಗಿ ನಿರ್ಮಿಸಿ ವ್ಯಾಪಾರಿಗಳು, ಪಾದಚಾರಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಈ ಭಾಗದ ಕಾರ್ಪೋರೆಟ್ ರ್  ಹಾಗು ಶಾಸಕರಾದ ದಿನೇಶ್ ಗುಂಡುರಾವ್ ಅವರು ಕೂಡಲೆ ಅಧಿಕಾರಿ ವರ್ಗ ಮತ್ತು ಗುತ್ತಿಗೆದಾರರಿಗೆ ಚುರುಕು ಮುಟ್ಟಿಸಿ ಅತಿ ಜರೂರಾಗಿ ಸಾರ್ವಜನಿಕರಿಗೆ ಅನುವು ಮಾಡಿಕೊಡಲೆಂದು  ಇಲ್ಲಿನ ಜನತೆಯ ಒತ್ತಾಯಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos