ಸಚಿವ ಸಿ.ಟಿ ರವಿ ಸಾಮಾಜಿಕ ಜಾಲತಾಣದಲ್ಲಿ  ಫುಲ್ ಟ್ರೋಲ್!?

ಸಚಿವ ಸಿ.ಟಿ ರವಿ ಸಾಮಾಜಿಕ ಜಾಲತಾಣದಲ್ಲಿ  ಫುಲ್ ಟ್ರೋಲ್!?

ಬೆಂಗಳೂರು, ಆ. 27: ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅಧಿಕಾರದ ಚುಕ್ಕಾಣಿ ಹಿಡಿದು ಒಂದು ತಿಂಗಳಾಯ್ತು. ಅದಾದ ಮೇಲೆ ಶುರುವಾಗಿದ್ದೇ ದೊಡ್ಡ ಸವಾಲು. 105 ಶಾಸಕರಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು? ಬಿಜೆಪಿ ಪಕ್ಷದವರಿಗೇ ಎಲ್ಲ ಸಚಿವ ಸ್ಥಾನ ನೀಡಿದರೆ ಸರ್ಕಾರ ರಚನೆಗೆ ಕಾರಣರಾದ ಅನರ್ಹ ಶಾಸಕರನ್ನು ಸಮಾಧಾನ ಪಡಿಸುವುದು ಹೇಗೆ? ಸಂಪುಟ ರಚನೆಯಿಂದ ಪಕ್ಷದ ಶಾಸಕರಲ್ಲಿ ಉಂಟಾಗುವ ಅಸಮಾಧಾನವನ್ನು ಶಮನಗೊಳಿಸುವುದು ಹೇಗೆ? ಎಂಬ ಲೆಕ್ಕಾಚಾರದಲ್ಲೇ ಕೊನೆಗೂ ಸಂಪುಟ ರಚನೆ ಮಾಡಿದ್ದರು. ನಿರೀಕ್ಷೆಯಂತೆ ಹಲವು ಹಿರಿಯ ಶಾಸಕರು ತಮಗೆ ಮಂತ್ರಿಗಿರಿ ಸಿಗದ ಬಗ್ಗೆ ಅಸಮಾಧಾನ ಹೊರಹಾಕಿದ್ದರು.

ಪ್ರಮುಖ ಖಾತೆ ಸಿಗದ ಕಾರಣ ಸಿ.ಟಿ. ರವಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ವ್ಯಂಗ್ಯವಾಡಿದ್ದಾರೆ. ಸಿ.ಟಿ. ರವಿ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಕಾರ್ಯಕರ್ತರು ಅವರ ಹಿಂದಿನ ಹೇಳಿಕೆಯನ್ನು ಪ್ರಸ್ತಾಪಿಸಿ ಲೇವಡಿ ಮಾಡಿದ್ದಾರೆ. ಸಂಪುಟ ರಚನೆಯಾದ ಸಂದರ್ಭದಲ್ಲಿ ಅಂಗಾರ, ಸುನಿಲ್ ಕುಮಾರ್, ಆರಗ ಜ್ಞಾನೇಂದ್ರ, ಉಮೇಶ್ ಕತ್ತಿ, ತಿಪ್ಪಾರೆಡ್ಡಿ, ಸಿ.ಎಂ. ಉದಾಸಿ, ಬಾಲಚಂದ್ರ ಜಾರಕಿಹೊಳಿ, ಮುರುಗೇಶ ನಿರಾಣಿ, ರೇಣುಕಾಚಾರ್ಯ ಮುಂತಾದವರು ತಮಗೆ ಸಚಿವ ಸ್ಥಾನ ಸಿಗದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಆಗ ಪ್ರತಿಕ್ರಿಯೆ ನೀಡಿದ್ದ ಸಿ.ಟಿ. ರವಿ, ‘ಯಾರಿಗೆಲ್ಲ ಯೋಗ ಮತ್ತು ಯೋಗ್ಯತೆಗಳು ಇದೆಯೋ ಅವರಿಗೆಲ್ಲ ಮಂತ್ರಿ ಸ್ಥಾನ ಸಿಕ್ಕಿದೆ. ಸಚಿವ ಸ್ಥಾನ ಸಿಗದವರು ಸಮಾಧಾನದಿಂದ ಇದ್ದರೆ ಮುಂದೊಂದು ದಿನ ಬಡ್ಡಿ ಸಮೇತ ಅವಕಾಶ ಸಿಗುತ್ತದೆ’ ಎಂಬ ಹೇಳಿಕೆ ನೀಡಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos