ಬೆಂಡೆಕಾಯಿಯಿಂದ ಕೂದಲು ಸೊಂಪಾಗಿ ಬೆಳೆಯಲು ಸಾಧ್ಯ ಅನ್ನೋದು ಗೊತ್ತಾ?

ಬೆಂಡೆಕಾಯಿಯಿಂದ ಕೂದಲು ಸೊಂಪಾಗಿ ಬೆಳೆಯಲು ಸಾಧ್ಯ ಅನ್ನೋದು ಗೊತ್ತಾ?

ಬೆಂಡೆಕಾಯಿಯನ್ನು
ಆಹಾರದಲ್ಲಿ ಸಾರು, ಪಲ್ಯ ಮಾಡಲು ಬಳಕೆ ಮಾಡುತ್ತಾರೆ. ಆದರೆ ಇದರಿಂದ ಕೂದಲು ಮತ್ತು ಸ್ಕಿನ್ ಗೂ ಉಪಯೋಗವಿದೆ
ಅನ್ನೋದನ್ನ ನೀವು ತಿಳಿದುಕೊಂಡರೆ, ಸುಲಭವಾಗಿ ಮನೆಯಲ್ಲಿಯೇ ಬ್ಯೂಟಿ ಟ್ರಿಕ್ಸ್ ಟ್ರೈ ಮಾಡಬಹುದು.

ಬೆಂಡೆಕಾಯಿ ಮಾಸ್ಕ್‌
ಮಾಡಿ ಮುಖಕ್ಕೆ ಹಚ್ಚಿದರೆ ಮುಖದ ಡ್ರೈ ನೆಸ್, ಪಿಂಪಲ್ ಸಮಸ್ಯೆ ನಿವಾರಣೆಯಾಗುತ್ತದೆ.

ಮೂವತ್ತು ವರ್ಷ ದಾಟಿದ
ಕೂಡಲೇ ಮುಖದ ಮೇಲೆ ಸುಕ್ಕು ಕಾಣಿಸಿಕೊಳ್ಳುತ್ತದೆ. ಅದಕ್ಕಾಗಿ ನೀವೂ ಬೆಂಡೆಕಾಯಿಯನ್ನು ಮಿಕ್ಸಿ ಮಾಡಿ
ಆ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ. ಇದರಿಂದ ಸುಕ್ಕು ನಿವಾರಣೆಯಾಗುತ್ತದೆ.

ಬೆಂಡೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ಹಾಕಿ ಅರ್ಧ ಗಂಟೆ ಇಡಿ. ನಂತರ ಆ ನೀರಿನಲ್ಲಿ ಕಾಟನ್ ಅದ್ದಿ ಅದನ್ನು ಮುಖದ ಮೇಲೆ ಹಚ್ಚಿದರೆ ಸ್ಕಿನ್ ರಾಶಸ್ ಮತ್ತು ಇನ್‌ಫೆಕ್ಷನ್‌ ಮೊದಲಾದ ಸಮಸ್ಯೆಗಳು ನಿವಾರಣೆಯಾಗುತ್ತವೆ.

ನಿಮ್ಮದು ಡ್ರೈ ಸ್ಕಿನ್
ಆಗಿದ್ದರೆ ಬೆಂಡೆಕಾಯಿಯ ಪೇಸ್ಟ್ ಮಾಡಿ ಆ ಜೆಲ್ ನ್ನು ಕೈ ಕಾಲುಗಳಿಗೆ ಹಚ್ಚಿ, ಅದು ಒಣಗಿದ ಮೇಲೆ ಚೆನ್ನಾಗಿ
ತೊಳೆಯಿರಿ. ಇದನ್ನು ವಾರದಲ್ಲಿ ಎರಡು ಬಾರಿ ಮಾಡಿದರೆ ಸ್ಕಿನ್ ಸಾಫ್ಟ್ ಆಗುತ್ತದೆ.

ಇನ್ನು ಕೂದಲಿನ ಬೆಳವಣಿಗೆಗೆ
ಸಹ ಬೆಂಡೆಕಾಯಿ ಸಹಾಯ ಮಾಡುತ್ತದೆ. ಬೆಂಡೆಕಾಯಿಯನ್ನು ಕತ್ತರಿಸಿ ನೀರಿಗೆ ಹಾಕಿ ಕುದಿಸಿ. ತಣ್ಣಗಾದ
ನಂತರ ಅದಕ್ಕೆ ನಿಂಬೆರಸ ಮಿಕ್ಸ್‌ ಮಾಡಿ ಶ್ಯಾಂಪೂವಿನ ನಂತರ ಇದರಿಂದ ಕೂದಲು ತೊಳೆಯಿರಿ. ಇದರಿಂದ ಕೂದಲು
ಸಾಫ್ಟ್ ಆಗುತ್ತದೆ.

ಬೆಂಡೆಕಾಯಿ ಪೇಸ್ಟ್ ನ್ನು ಸ್ಕಾಲ್ಪ್ ಗೆ ಹಚ್ಚಿ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಚೆನ್ನಾಗಿ ಆಗುತ್ತದೆ. ಇದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos