ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಭಿರ

ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಭಿರ

ಹೊಸಕೋಟೆ, ಜು. 17 : ಹೊಸಕೋಟೆ ನಗರಸಭೆಯ ಪೌರಕಾರ್ಮಿಕರಿಗೆ ಇಂದು ಉಚಿತ ಆರೋಗ್ಯ ತಪಾಸಣೆಯನ್ನು ಕರ್ನಾಟಕ ರಾಜ್ಯ ಮಾನ ಹಕ್ಕುಗಳ ಜಾಗೃತ ಮೂಡಿಸುವವರ ಕ್ಷೇಮಾಭಿವೃದ್ಧಿ ಸಂಘ ಮತ್ತು ಎಂಟಿಬಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಿಲಿಕಾನ್ ಸಿಟಿ ಆಸ್ಪತ್ರೆ ಸಹಯೋಗದಲ್ಲಿ ಇಂದು ನಗರಸಭೆಯಲ್ಲಿ ಆರೋಗ್ಯ ತಪಾಸಣೆ ಜೋತೆಗೆ ಶುಗರ್, ಬ್ಲಡ್ ಚೇಕ್, ಮೂಳೆ ರೋಗ, ನರಗಳ ರೋಗ, ಉಚಿತ ಔಷಧಿಗಳು ಮತ್ತು ಮಾತ್ರೆಗಳನ್ನು ವಿತರಿಸಿದರು.

ನಂತರ ಮಾತನಾಡಿದ ಸಂಘದ ಅಧಕ್ಷ ವಿಶ್ವನಾಥ್ ಪ್ರತಿ ದಿನ ಬೆಳಿಗ್ಗೆ ಎದ್ದು ಮುಖನು ತೊಳೆಯದೆ ನಗರ ಪರಿಸರವನ್ನು ಸ್ವಚ್ಚ ಮಾಡಲು ನೂರಾರು ಜನ ಪೌರಕಾರ್ಮಿಕರು ಸ್ವಚ್ಚತೆಯ ಜೋತೆಗೆ ಅವರ ಆರೋಗ್ಯವನ್ನು ಸರಿಯಾಗಿ ನೋಡಕೊಳ್ಳವುದಿಲ್ಲ. ನೀವು ಎದ್ದು ಏನೇ ಸಮಸ್ಯೆ ಇದ್ದರು ತಾವುಗಳು ಬೆಳಿಗ್ಗೆ ಸ್ವಚ್ಚತೆಗೆ ಆದ್ಯತೆ ನೀಡುತ್ತಿರಿ, ಹಾಗೆಯೇ ಕೆಲಸಕ್ಕೂ ಹಾಜರಾಗುತ್ತಿರಾ. ಇಲ್ಲವಾದರೇ ಒಂದು ದಿನ ಗೈರು ಹಾಜರಾದರೆ ಅವತ್ತಿನ ಹೋಟ್ಟೆಯ ತುಂಬಿಸಿಕೊಳ್ಳುವುದು ಬಹಳಷ್ಟು ಪೌರಕಾರ್ಮಿಕರಿಗೆ ಕಷ್ಟವಾಗುತ್ತದೆ.

ಅದ್ದರಿಂದ ನೀಮ್ಮ ಆರೋಗ್ಯದ ಜೋತೆಗೆ ನಗರವನ್ನು ಸಹ ಸ್ವಚ್ಚವಾಗಿಡಲು ನೀಮ್ಮಿಂದ ಮಾತ್ರ ಸಾಧ್ಯ. ಒಂದು ವಾರ ನೀವುಗಳು ಕೆಲಸ ಮಾಡದೇ ಹೋದರೆ ನಗರ ಸ್ವಚ್ಚತೆ ಹೇಗಿರುತ್ತೇ ಎಂದು ಊಹಿಸಲು ಸಾಧ್ಯವಿಲ ಎಂದು ವಿಶ್ವನಾಥ್ ಹೇಳಿದರು. ಕಾರ್ಯಕ್ರಮದಲ್ಲಿ ಪೌರಾಯುಕ್ತರಾದ ನಿಸ್ಸಾರ್ ಅಹಮದ್, ನಗರಸಭೆ ಮಾಜಿ ಸದಸ್ಯೆ ಪಾರ್ವತಿ ಚಂದ್ರಶೇಖರ್, ವರದಾಪುರ ಬಾಲಚಂದ್ರನ್, ಕೂಲಿಕಾರ್ಮಿಕರ ಜಿಲ್ಲಾಘಟಕದ ಅಧ್ಯಕ್ಷ ಆಂನದ್, ಪರಿಸರ ಆಭಯಂತರರಾದ ಆರ್.ವೆಂಕಟೇಶ್, ಆರೋಗ್ಯ ನೀರಿಕ್ಷಕರಾದ ಉದಯ್, ಸಿಲಿಕಾನ್ ಸಿಟಿ ಆಸ್ಪತ್ರೆಯ ವೈಧ್ಯರಾದ ಡಾ,ಹರ್ಶಿತರೆಡ್ಡಿ, ಡಾ,ಶರ್ಮಿಳಾ, ಡಾ,ಸುಭೋದ್, ಇತರರು ಹಾಜರಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos