ಗ್ರಾಹಕರಿಗೆ ಉಚಿತ ಸ್ಯಾನಿಟೈಸರ್

ಗ್ರಾಹಕರಿಗೆ ಉಚಿತ ಸ್ಯಾನಿಟೈಸರ್

ಗೌರಿಬಿದನೂರು: ನಗರದ ದೇವಿ ಡಿಟಿಟಲ್ ಸ್ಟುಡಿಯೋದಲ್ಲಿ ಬರುವ ಗ್ರಾಹಕರುಗಳಿಗೆ ಉಚಿತವಾಗಿ ಸ್ಯಾನಿಟೈಸರ್ ಪಾಕೇಟ್‌ಗಳನ್ನು ನೀಡಲಾಗುತ್ತಿದೆ , ಜತೆಗೆ ಕೊರೋನಾ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತಿದೆ ಎಂದು ಮಾಲೀಕ ಹಾಗೂ ಸಂಘದ ಗೌರವಾಧ್ಯಕ್ಷ ದೇವಿಮಂಜುನಾಥ್ ಹೇಳಿದರು.
ಸ್ಟುಡಿಯೋಗೆ ಬಂದ ಗ್ರಾಹಕರು ಭಾವಚಿತ್ರ ತೆಗೆಸಿಕೊಂಡವರಿಗೆ ಪೊಟೋ ಜತೆಗೆ ಸ್ಯಾನಿಟೈಸರ್ ವಿತರಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಾಲೂಕಿನಾಧ್ಯಂತ ಕೊರೋನಾ ಸೊಂಕು ದಿನೇ ದಿನೆ ಹೆಚ್ಚಳವಾಗುತ್ತಿದೆ, ಈ ನಿಟ್ಟಿಲ್ಲಿ ಸ್ಟುಡಿಯೋಗೆ ಬರುವ ಗ್ರಾಹಕರುಗಳಿಗೆ ಮಾಸ್ಕ್ ಧರಿಸುವುದರಿಂದ ಆಗುವ ಪ್ರಯೋಜನಗಳು ಹಾಗೂ ಕಡ್ಡಾಯವಾಗಿ ಧರಿಸುವ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕೊರೋನಾ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಆದರೆ ಮುನ್ನೆಚ್ಚರಿಕಾ ಕ್ರಮಗಳು ಅತ್ಯಗತ್ಯ , ಕೈಗಳನ್ನು ಸೋಪು ನೀರಿನಿಂದ ಅಗ್ಗಾಗ್ಗೆ ತೊಳೆದುಕೊಳ್ಳಬೇಕು, ಕೈಗಳಿಗೆ ಸ್ಯಾನಿಟೈಸರ್ ಬಳಕೆ ಯ ಜತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು, ಮುಖ್ಯವಾಗಿ ಅಂಗಡಿ ಮುಗ್ಗಟ್ಟುಗಳಲ್ಲಿ ಗ್ರಾಹಕರು ಮತ್ತು ಮಾಲೀಕರು ಸಾಮಾಜಿಕ ಅಂತರವನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಹೇಳಿದರು.
ನಗರದ ಅಂಗಡಿ ಮುಗ್ಗಟ್ಟುಗಳ ಮಾಲೀಕರು ತಮ್ಮ ವಹಿವಾಟಿನ ಹಣವನ್ನು ಒಂದು ತೆರೆದ ಬಾಕ್ಸ್ನಲ್ಲಿ ಹಾಕಿಕೊಂಡು ಒಂದೆರಡು ಗಂಟೆಗಳ ಬಳಿಕ ಕೈಗಳಿಗೆ ಗ್ಲೌಸ್ ಹಾಕಿಕೊಂಡು ತೆಗೆದುಕೊಳ್ಳುವುದು ಸೂಕ್ತವಾಗಿದೆ ಇದರಿಂದ ನೋಟಿನಿಂದ ಬರುವ ಕೊರೋನಾ ಸೋಂಕು ತಡೆಯಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos