“ಚರ್ಮೋತ್ಪನ್ನ ಮುಕ್ತಗೊಳಿಸಿ, ಭೂಮಿ ಉಳಿಸಿ” ಪೇಟಾ ಪ್ರತಿಭಟನೆ!

“ಚರ್ಮೋತ್ಪನ್ನ ಮುಕ್ತಗೊಳಿಸಿ, ಭೂಮಿ ಉಳಿಸಿ” ಪೇಟಾ ಪ್ರತಿಭಟನೆ!

ನಾಗಪುರ್, ಏ. 20, ನ್ಯೂಸ್ ಎಕ್ಸ್ ಪ್ರೆಸ್: ಮೈಗೆ ಬಣ್ಣ ಬಳಿದುಕೊಂಡು ರಸ್ತೆ ಬದಿಯಲ್ಲಿ ನಿಲ್ಲುವ ಮೂಲಕ ಒಂದಷ್ಟು ಯುವಜನತೆ ಚರ್ಮದ ಬಳಕೆ ವಿರುದ್ಧ ಜಾಗೃತಿ ಮೂಡಿಸುವ ಜೊತೆಗೆ ಭೂಮಿಯನ್ನು ಉಳಿಸುವಂತೆಯೂ ಮನವಿ ಮಾಡಿದೆ. ನಾಗ್ಪುರದ ಸಂವಿಧಾನ್ ಸ್ಕ್ವೇರ್ ನಲ್ಲಿ ಏಪ್ರಿಲ್ 18ರಂದು ಈ ಜಾಗೃತಿ ಕಾರ್ಯಕ್ರಮ ನಡೆದಿದ್ದು, ಪೀಪಲ್ ಫಾರ್ ದ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಎನಿಮಲ್ಸ್(ಪೇಟ) ಮತ್ತು ಪೀಪಲ್ ಫಾರ್ ಎನಿಮಲ್ಸ್ ವೆಲ್ಫೇರ್ ಆರ್ಗನೈಸೇಷನ್ ಜಂಟಿಯಾಗಿ ಇದನ್ನು ಆಯೋಜಿಸಿತ್ತು. ಬರಿ ಮೈಗೆ ಬಣ್ಣ ಬಳಿದುಕೊಂಡು ನಿಂತ ಯುವಜನತೆ ಆಕರ್ಷಣೆಯ ಕೇಂದ್ರವಾದ್ದರಿಂದ ಸಾರ್ವಜನಿಕರ ಗಮನ ಸಹಜವಾಗಿಯೇ ಅತ್ತ ಸೆಳೆಯಲ್ಪಟ್ಟಿದೆ. ಈ ಮೂಲಕ ಅನೇಕರು ಅಲ್ಲಿನ ಪ್ಲೇಕಾರ್ಡ್‍ಗಳನ್ನು ಓದಿ, ಹತ್ತಿರ ಹೋಗಿ ಮಾಹಿತಿ ತಿಳಿದಿದ್ದರಿಂದ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿದೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos