ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಚಿತ ಆರೋಗ್ಯ ತಪಾಸಣಾ ಶಿಬಿರ

 

 

 

 

 

 

 ಪೀಣ್ಯ ದಾಸರಹಳ್ಳಿ, ಸೆ. 15: ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಪಾಲಿಕೆ ಸದಸ್ಯ ಎನ್.  ಲೋಕೇಶ್ ನೇತೃತ್ವದಲ್ಲಿ ಮಲ್ಲಸಂದ್ರದ ಐಡಿಯಲ್ ಶಾಲೆಯ ಆವರಣದಲ್ಲಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಜನೌಷಧಿ ವಿತರಣೆ, ಆಯುಷ್ಮಾನ್ ಭಾರತ ಹೆಲ್ತ್ ಕಾರ್ಡ್ ವಿತರಣೆ, ಒಣ ಹಾಗೂ ಹಸಿ ತ್ಯಾಜ್ಯ ವಿಂಗಡನೆಗೆ ಡಬ್ಬಿಗಳ ವಿತರಣೆಯನ್ನು ಕೇಂದ್ರ ಸಚಿವ ಡಿ. ವಿ. ಸದಾನಂದ ಗೌಡ ಹಾಗೂ ನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್. ಮುನಿರಾಜು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸದಾನಂದ ಗೌಡ ` ಮೋದಿಯವರ ಜನ್ಮದಿನವನ್ನು  ಸೇವಾ ಸಪ್ತಾಹವಾಗಿ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಕರ್ನಾಟಕದಲ್ಲಿ ಪ್ರಥಮ ಕಾರ್ಯಕ್ರಮ ಮಲ್ಲಸಂದ್ರದಿಂದ ಪ್ರಾರಂಭವಾಗಿದೆ. ಬಡವರಿಗಾಗಿ ಮಾಡಿರುವ ಈ ಎಲ್ಲಾ ಯೋಜನೆಗಳನ್ನು ಅವರಿಗೆ ತಲುಪಿಸುವ ಕೆಲಸ ಮಾಡುತ್ತಿರುವುದು ಮೆಚ್ಚುಗೆಯ ಕೆಲಸ ´ಎಂದರು.

ಎಸ್. ಮುನಿರಾಜು ಮಾತನಾಡಿ ` ಸರ್ಕಾರಿ ಸೌಲಭ್ಯಗಳ ನಿಮ್ಮ ಬಾಗಿಲಿಗೆ ತಲುಪುತ್ತವೆ. ಅದನ್ನು ನೀವು ಸದುಪಯೋಗ ಪಡೆದುಕೊಳ್ಳಬೇಕು´ ಎಂದರು.

ಸಮಾರಂಭದಲ್ಲಿ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸುರೇಶ್, ಬಿಜೆಪಿ ಮುಖಂಡರಾದ ಎಂ. ಸಿದ್ದರಾಜು, ಬಿ.ಎಂ. ನಾರಾಯಣ್, ಟಿ.ಎಸ್. ಗಂಗಾರಾಜು, ಟಿ.ಶಿವಕುಮಾರ್, ವಿನೋದ್ ಗೌಡ, ಹೇಮಾಚಲ ರೆಡ್ಡಿ, ರಮೇಶ್ ಯಾದವ್, ರಾಮಚಂದ್ರಪ್ಪ ಮತ್ತಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos