ಉಚಿತ ಜ್ವರ ತಪಾಸಣಾ ಕೇಂದ್ರ

ಉಚಿತ ಜ್ವರ ತಪಾಸಣಾ ಕೇಂದ್ರ

ತುಮಕೂರು:ನಗರದಲ್ಲಿ ಸಮಾನ ಮನಸ್ಕ ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಜಿಲ್ಲಾಡಳಿತದ ಸಹಕಾರದೊಂದಿಗೆ ಉಚಿತ ಜ್ವರ ತಪಾಸಣಾ ಕೇಂದ್ರವನ್ನು ತೆರೆಯಲಾಗಿದ್ದು, ಜನರ ಸೇವೆಗೆ ಉಪಯೋಗಿಸಲಾಗುತ್ತಿದೆ ಎಂದು ಒಕ್ಕೂಟದ ಸಂಚಾಲಕರು ಹಾಗೂ ಜಿಲ್ಲಾ ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ವೀರಸಾಗರದ ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾತಿಳಿತದ ನೇರ ನಿಗಾವಣೆಗೆ ಒಳಪಟ್ಟಂತೆ ವೀರಸಾಗರದ ಸ್ಟಾರ್ ಪ್ಯಾಲೇಸ್ ಹತ್ತಿರದ ಶಾಹೀನ್ ಕಿಡ್ಸ್ ಆವರಣದಲ್ಲಿ ಪಿವರ್ ಕ್ಲಿನಿಕ್ ತರೆಯಲಾಗಿದೆ. ಇದರಲ್ಲಿ ಗಂಟಲು ದ್ರವ ಪರೀಕ್ಷೆ, ರಕ್ತ ಪರೀಕ್ಷೆ, ಎಕ್ಸ್-ರೇ ಮತ್ತಿತರ ಸೌಲಭ್ಯಗಳು ದೊರೆಯಲಿದ್ದು, ಐದು ಜನ ನುರಿತ ವೈದ್ಯರು ದಿನಕ್ಕೆ ಇಬ್ಬರಂತೆ ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಸದರಿ ಪಿವರ್ ಕ್ಲಿನಿಕ್‌ನಲ್ಲಿ ನುರಿತ ಮತ್ತು ಸರಕಾರಿ ವೈದ್ಯರಾದ ಡಾ.ಇಂತಿಯಾಜ್, ಡಾ.ಮುದಸ್ಸಿರ್, ಡಾ.ಅಜ್ಗರ್ ಬೇಗ್, ಡಾ.ಅರೀಫುದ್ದೀನ್, ಡಾ.ಇಮ್ರಾನ್ ಅವರುಗಳು ಉಚಿತವಾಗಿ ತಮ್ಮ ಸೇವೆಯನ್ನು ನೀಡಲು ಮುಂದೆ ಬಂದಿದ್ದು, ಇವರುಗಳ ಜೊತೆಗೆ,ಓರ್ವ ಲ್ಯಾಬ್‌ಟೆಕ್ನೀಷಿಯನ್,ಇಬ್ಬರು ನರ್ಸ್ಗಳು ಹಾಗೂ ಇಬ್ಬರು ಆಯಾ ಕೆಲಸ ಮಾಡಲಿದ್ದು, ಉಚಿತ ಅಂಬುಲೆನ್ಸ್ ವ್ಯವಸ್ಥೆ ಮತ್ತು ಹೆಲ್ತ್ ಲೈನ್ ಸಹ ತೆರೆಯಲಾಗಿದೆ. ದೂ. ಸಂಖ್ಯೆ ೬೩೬೬೯೩೭೫೭೭- ೬೩೬೬೯೩೭೫೬೭ ಗಳಿಗೆ ಕರೆ ಮಾಡಿ ದಿನದ ೨೪ ಗಂಟೆ, ವಾರದ ಏಳು ದಿನಗಳು ಸೇವೆಯನ್ನು ಪಡೆಯುಬಹುದಾಗಿದೆ ಎಂದು ಇಕ್ಬಾಲ್ ಅಹಮದ್ ಮಾಹಿತಿ ನೀಡಿದರು.

 

ಫ್ರೆಶ್ ನ್ಯೂಸ್

Latest Posts

Featured Videos