ಉಚಿತ ಕಲಾಕೃತಿ ಪ್ರದರ್ಶನ

  • In State
  • December 11, 2019
  • 145 Views
ಉಚಿತ ಕಲಾಕೃತಿ ಪ್ರದರ್ಶನ

ಬೆಂಗಳೂರು, ಡಿ. 11: ಯೂಥ್ ಪೊಟೋಗ್ರಾಫಿಕ್ ಸೊಸೈಟಿ ಡಿ.14 ಮತ್ತು 15 ರಂದು  ಕರ್ನಾಟಕ ಚಿತ್ರಕಲಾ ಪರಿಷತ್ ನಲ್ಲಿ ಉಚಿತ  ಕಲಾಕೃತಿ ಪ್ರದರ್ಶನ ಹಮ್ಮಿಕೊಂಡಿದೆ.  ಎರಡು ದಿನಗಳ ಕಾಲ ನಡೆಯುವ ಕಲಾಕೃತಿ ಪ್ರದರ್ಶನದಲ್ಲಿ ಕಳೆದ ಎರಡು ವರ್ಷದ  ಅವಧಿಯಲ್ಲಿ  ವಿವಿಧ  ದೇಶಗಳಲ್ಲಿ ನಡೆದ ರಾಷ್ಟ್ರಿಯ ಮತ್ತು ಅಂತರಾಷ್ಟ್ರಿಯ ಛಾಯಾಚಿತ್ರ ಸಲಾನ್ ನಲ್ಲಿ ಅತ್ಯೂತ್ತಮ ಕ್ಲಬ್ ಪ್ರಶಸ್ತಿಗೆ ಆಯ್ಕೆಯಾದ ಭಾರತೀಯರ 65 ಕ್ಕೂ ಅಧಿಕ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗುವುದು ಎಂದು ವೈಪಿಎಸ್ ಅಧ್ಯಕ್ಷ ಹೆಚ್ ಸತಿಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವೈಪಿಎಸ್ ಸಂಸ್ಥೆ ಕಳೆದ 45 ವರ್ಷಗಳಿಂದ ಛಾಯಾಗ್ರಾಯಕ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಛಾಯಾಚಿತ್ರದಲ್ಲಿ ಆಸಕ್ತಿಯುಳ್ಳ ಯುವ ಸಮೂಹಕ್ಕೆ ತರಬೇತಿ ನೀಡುತ್ತ ಬಂದಿದೆ. ಈಗಾಗಲೇ 1೦೦ ಕ್ಕೂ ಹೆಚ್ಚು ರಾಷ್ಟ್ರಿಯ  ಮತ್ತು ಅಂತರಾಷ್ಟ್ರಿಯ ಮಟ್ಟದ ಛಾಯಾಚಿತ್ರ ಪ್ರದರ್ಶನದಲ್ಲಿ ಭಾಗವಹಿಸಿ ಪ್ರಶಸ್ತಿ ಮೂಡಿಗೇರಿಕೊಂಡಿದೆ ಎಂದು ಹೇಳಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos