ಮಾಜಿ ಸಚಿವ ಆನಂದ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಟ್ವಿಸ್ಟ್.!

ಮಾಜಿ ಸಚಿವ ಆನಂದ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಟ್ವಿಸ್ಟ್.!

ವಿಜಯನಗರ: ವಿಜಯನಗರ ಕ್ಷೇತ್ರದ ಮಾಜಿ ಸಚಿವ ಆನಂದ್ ಸಿಂಗ್ ಇಂದು ಹೊಸಪೇಟೆ ತಾಲ್ಲೂಕಿನ ಕಮಲಾಪುರ ಪಟ್ಟಣದ ತಮ್ಮ ಗೃಹವಾದ ರಜ್ಪೂತ್ ಕೋಟೆಯಲ್ಲಿ ಧಿಡೀರನೆ ಪ್ರೆಸ್ ಮೀಟ್ ನಡೆಸಿಟ್ವಿಸ್ಟ್ ಕೊಟ್ಟಿದ್ದಾರೆ.
2018ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ಮಾಜಿ ಸಚಿವ ಆನಂದ್ ಸಿಂಗ್ ವಿಜಯನಗರ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿ ಇತಿಹಾಸವನ್ನೇ ಸೃಷ್ಟಿ ಮಾಡಿದ್ದರು. 2023ರ ವಿಧಾನಸಭಾ ಚುನಾವಣೆಯಲ್ಲಿ ಅವರು ಸೋತಿದ್ದರು ಸೋಲುಂಡ ನೋವಿನಿಂದ ಕ್ಷೇತ್ರದ ಜನರಿಂದ ಸ್ವಲ್ಪ ದೂರ ಉಳಿದಿದ್ದರು. ಆದರೆ ಇಂದು ಭಾನುವಾರ ರಜ್ಪುತ್ ಕೋಟೆಯಲ್ಲಿ ಪತ್ರಿಕೆ ಮಾಧ್ಯಮದವರಿಗೆ ಕರೆದು. ಸುದ್ದಿಗೋಷ್ಠಿ ಮಾಡುವ ಮೂಲಕ ವಿಜಯನಗರ ಕ್ಷೇತ್ರದ ಜನರಿಗೆ.

ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸಿ ಶಾಸಕ ಸಂಸದರನ್ನಾಗಿ ಮಾಡಲು ಸಹಕರಿಸಿದ ಕ್ಷೇತ್ರದ ಜನತೆಗೆ ಹಿರಿಯರಿಗೆ ಸಂಘ ಸಂಸ್ಥೆಗಳಿಗೆ,ಯುವಕರಿಗೆ ಹಾಗೂ ರೈತ ಬಾಂಧವರಿಗೆ ನನ್ನ ಹಾಗೂ ನನ್ನ ಕುಟುಂಬದಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಹೊಸಪೇಟೆಯಲ್ಲಿ ಸಕ್ಕರೆ ಕಾರ್ಖಾನೆ ಹೊಸದಾಗಿ ಕಟ್ಟಲು ಈಗಾಗಲೇ ನಿಗದಿಪಡಿಸಿರುವ ಜಾಗದ ವಿಸ್ತೀರ್ಣ ತುಂಬಾ ಕಡಿಮೆ ಇದ್ದು ಅಂದರೆ ಕೇವಲ 84.86 ಹೆಕ್ಟರ್ ಜಾಗ ಇದ್ದು ಇದು ಅಲೆಮನೆ ಹಾಕುವುದಕ್ಕೆ ಸಾಕಾಗುತ್ತದೆ ಶುಗರ್ ಕಾರ್ಖಾನೆ ಕಟ್ಟಲು ಕನಿಷ್ಠ 150 ಎಕ್ಟರ್ ಬೇಕಾಗುತ್ತದೆ. ಆದ್ದರಿಂದ ಇದು ಒಂದು ಅವೈಜ್ಞಾನಿಕ ಯೋಚನೆ ಆಗಿರುತ್ತದೆ. ನಾನು ಅಧಿಕಾರದಲ್ಲಿದ್ದಾಗ ನಿಗದಿಪಡಿಸಿದ ಜಾಗ 192 ಎಕರೆ ಇದೆ.ಇಲ್ಲಿ ಸಕ್ಕರೆ ಕಾರ್ಖನೆ ಹಾಕಲು ಸೂಕ್ತ ಎಂದು ಆಲೋಚಿಸಿದ್ದೆ ಆ ಜಾಗ 82 ಎಕರೆ ಸರ್ಕಾರಿ ಜಾಗ 90 2 ಎಕರೆ ಆರ್ಬಿಎಸ್ಎಸ್ ಗೆ ಸರ್ಕಾರ ಲೀಜ್ ನೀಡಿದ್ದು ಮುಂದಿನ ವರ್ಷ ಅಕ್ಟೋಬರ್ ಗೆ ಮುಗಿಯುತ್ತೆ ಮತ್ತು 30 ಎಕ್ಟರ್ ಸರ್ಕಾರಿ ಜಾಗ ಒಬ್ಬ ವ್ಯಕ್ತಿ ಇದು ನನ್ನ ಸ್ವಂತದ್ದು ಎಂದು ಕೋರ್ಟಿಗೆ ಹೋಗಿದ್ದಾನೆ ಈ ಜಾಗವನ್ನು ಸರ್ಕಾರ ಸ್ವಾದಿನಕ್ಕೆ ತೆಗೆದುಕೊಂಡು ಕಟ್ಟಿಕೊಡಲು ಸೂಕ್ತ ಇದನ್ನು ಸರ್ಕಾರ ಬೇರೆಯವರಿಗೆ ಶುಗರ್ ಫ್ಯಾಕ್ಟರಿ ಕಟ್ಟಲು ನೀಡದೆ ಸ್ಥಳೀಯರಾದ ನನಗೆ ಕೊಟ್ಟರೂ ಕೂಡ ನಾನು ಕಟ್ಟಿ ಜನಸೇವೆ ಮಾಡುತ್ತೇನೆ.
ವರದಿಗಾರ ಎ ಚಿದಾನಂದ

ಫ್ರೆಶ್ ನ್ಯೂಸ್

Latest Posts

Featured Videos