ಮಾಜಿ ಕ್ರಿಕೆಟಿಗನ ಮೇಲೆ ಮಾರಣಾಂತಿಕ ಹಲ್ಲೆ

ಮಾಜಿ ಕ್ರಿಕೆಟಿಗನ ಮೇಲೆ ಮಾರಣಾಂತಿಕ ಹಲ್ಲೆ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಬೌಲರ್‌ ಹಾಗೂ ದೆಹಲಿ ತಂಡದ ಆಯ್ಕೆ ಸಮಿತಿ ಅಧ್ಯಕ್ಷರಾಗಿರುವ ಅಮಿತ್‌ ಭಂಡಾರಿ ಅವರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.

ಈ ಘಟನೆ ದೆಹಲಿಯ ಸೇಂಟ್‌ ಸ್ಟೀಫನ್‌ ಶಾಲಾ ಮೈದಾನದಲ್ಲಿ ಟಿ-20 ಪಂದ್ಯಾವಳಿಗೆ ದೆಹಲಿ ಹಿರಿಯ ತಂಡದ ಆಯ್ಕೆ ಮಾಡುವ ವೇಳೆ ನಡೆದಿದ್ದು, ಹಾಕಿ ಸ್ಟಿಕ್‌ ಹಾಗೂ ಕಬ್ಬಿಣದ ಸಲಾಕೆಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಹಲ್ಲೆ ನಡೆದಾಗ ಭಂಡಾರಿಯವರನ್ನು ರಕ್ಷಿಸಲು ಮುಂದಾದಾ ವೇಳೆ ಶೂಟ್‌ ಮಾಡುವುದಾಗಿ ದುಷ್ಕರ್ಮಿಗಳು ಬೆದರಿಸಿದ್ದರಿಂದ ನಾವು ದೂರ ನಿಂತೆವು. ಭಂಡಾರಿ ಅವರು ಓಡಿ ಹೋಗಿದ್ದರಿಂದ ಹೆಚ್ಚು ಗಾಯವಾಗಿಲ್ಲ ಎಂದು ತಂಡದಲ್ಲಿದ್ದ ಆಟಗಾರನೊಬ್ಬ ಹೇಳಿದ್ದಾನೆ.

ಮೊದಲನೇ ಪಂದ್ಯ ಮುಗಿದು ಎರಡನೇ ಪಂದ್ಯ ಆರಂಭವಾಗುವ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಗೌತಮ್‌ ಗಂಭೀರ್‌ ಹಾಗೂ ಬಿಷನ್‌ ಸಿಂಗ್‌ ಬೇಡಿ ಖಂಡಿಸಿದ್ದಾರೆ. ಹಲ್ಲೆಯಿಂದ ತಲೆ ಹಾಗೂ ಕಿವಿಗೆ ಹೊಡೆತ ಬಿದ್ದಿದ್ದು, ಕೂಡಲೇ ಸಂತ್‌ ಪರಮಾನಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ದೆಹಲಿ ಕ್ರಿಕೆಟ್‌ ಅಕಾಡೆಮಿ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ದೆಹಲಿ ಕ್ರಿಕೆಟ್‌ ಅಧ್ಯಕ್ಷ ರಜತ್‌ ಶರ್ಮಾ ಪ್ರತಿಕ್ರಿಯಿಸಿದ್ದು, ಈ ರೀತಿಯಾಗಿರುವುದು ಖಂಡನೀಯ. ಭಂಡಾರಿ ಅವರ ಮೇಲೆ ಹಲ್ಲೆ ನಡೆಸಿರುವವರು ಯಾರು ಎನ್ನುವುದನ್ನು ತನಿಖೆ ನಡೆಸಲಾಗುವುದು. ಇದೇ ವಿಚಾರವಾಗಿ ಈಗಾಗಲೇ ದೆಹಲಿ ಪೊಲೀಸ್‌ ಆಯುಕ್ತರೊಂದಿಗೆ ಚರ್ಚಿಸಲಾಗಿದೆ. ಯಾವುದೇ ಕಾರಣಕ್ಕೂ ತಪಿಸ್ಥತರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos