ಡಿಫ್ತೀರಿಯಾಗೆ 7 ಮಂದಿ ಬಲಿ

ಡಿಫ್ತೀರಿಯಾಗೆ 7 ಮಂದಿ ಬಲಿ

ಕಲಬುರ್ಗಿ, ಡಿ. 13 : ಚಳಿಗಾಲ ಆರಂಭವಾಗುತ್ತಿದ್ದಂತೆ ಅತ್ತ ಕಲಬುರ್ಗಿಯಲ್ಲಿ ಜ್ವರಗಳ ಸರಣಿ ಆರಂಭವಾಗಿದೆ. ಡಿಪ್ತೀರಿಯಾಗೆ (ಗಂಟಲಮಾರಿ) 7 ಮಂದಿ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲಾಧಿಕಾರಿ ಎಂಕೆ ಪಾಟೀಲ್ ಸುದ್ದಿಗಾರರೊಂದಿಗೆ ಮಾತನಾಡಿ, ಸೆ. 2019ರಿಂದ ಜಿಲ್ಲೆಯಲ್ಲಿ 134ಕ್ಕೂ ಹೆಚ್ಚು ಡಿಫ್ತೀರಿಯಾ ಪ್ರಕರಣಗಳು ದಾಖಲಾಗಿದೆ. ಈ ಪೈಕಿ 7 ಮಂದಿ ಗಂಭೀರವಾಗಿ ಬಳಿಕ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
‘ಕಳೆದ ಸೆ. ಜಿಲ್ಲೆಯ ವಿವಿಧ ಆಸ್ಪತ್ರಗೆಳಲ್ಲಿ 134 ಡಿಫ್ತೀರಿಯಾ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 7 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ ಹಲವು ಆಸ್ಪತ್ರೆಗಳಲ್ಲಿ ದಾಖಲಾಗಿರುವವರ ಪೈಕಿ ಹಲವರು ಗಂಭೀರವಾಗಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಲಾಗಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಈ ಕುರಿತಂತೆ ರಾಜ್ಯ ಸರ್ಕಾರದ ವತಿಯಿಂದ ಜಾಗೃತಿ ಅಭಿಯಾನ ನಡೆಸಲಾಗುವುದು ಎಂದು ಎಂಕೆ ಪಾಟೀಲ್ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos