ಫುಟ್ ಪಾತ್ ಮೇಲೆ ಮಲಗಿದ್ದ 15 ಜನರ ಮೇಲೆ ಹರಿದ ಕಂಟೇನರ್ ಲಾರಿ, ಓರ್ವ ಬಾಲಕ‌ ಸಾವು

ಫುಟ್ ಪಾತ್ ಮೇಲೆ ಮಲಗಿದ್ದ 15 ಜನರ ಮೇಲೆ ಹರಿದ ಕಂಟೇನರ್ ಲಾರಿ, ಓರ್ವ ಬಾಲಕ‌ ಸಾವು

ನೆಲಮಂಗಲ: ಜೀವನೋಪಾಯಕ್ಕಾಗಿ ದೂರದ ಮಹಾರಾಷ್ಟ್ರದಿಂದ ಬೆಂಗಳೂರಿಗೆ ಬಂದು ಟೋಲ್ ಬಳಿ ಮಲಗಿದ್ದ 15 ಮಂದಿ ಮೇಲೆ‌ ಕಂಟೇನರ್ ಲಾರಿ ಹರಿದ ಪರಿಣಾಮ ಓರ್ವ ಬಾಲಕ‌ ಸಾವನ್ನಪ್ಪಿದ್ದು, ಮತ್ತೋರ್ವ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ನೆಲಮಂಗಲ ಜಾಸ್ ಟೋಲ್ ಬಳಿ ಸಂಭವಿಸಿದೆ. ಇಂದು ಬೆಳ್ಳಬೆಳಗ್ಗೆ ನುಸುಕಿನ ಜಾವದಲ್ಲಿ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4 ರ ಜಾಸ್ ಟೋಲ್ ಬಳಿ ಇಂತಹ ಹಿಟ್ ಅಂಡ್ ರಸ್ ಪ್ರಕರಣ ಸಂಭವಿಸಿದೆ. ಕೆಲಸಕ್ಕಾಗಿ ಬಂದಿದ್ದ ಜಾಸ್ ಟೋಲ್ ಬಳಿಯ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿಯ ಫುಟ್ ಪಾಲ್ ಮೇಲೆ‌ ಆಶ್ರಯ ಪಡೆದಿದ್ದರು. ಬೆಳಗ್ಗಿನ ಜಾವ ಮಂಜುಕವಿದ ವಾತಾವರಣ ಇದ್ದುದರಿಂದ ಲಾರಿ ಹರಿದು ಬಾಲ ಜೋತು ಚೌಹಾನ್ ಎಂಬ 14 ವರ್ಷದ ಬಾಲಕನ ದೇಹ ಚಿದ್ರವಾಗಿ ಸ್ಥಳದಲ್ಲೆ ಸಾವನ್ನಪ್ಪಿದ್ದು,
ಮಾಲ ಎಂಬ 45 ವರ್ಷ ಮಹಿಳೆಗೆ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣ ಸಂಬಂದ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos