ಫುಟ್ ಬಾಲ್ ಮಾಂತ್ರಿಕ ಮೆಸ್ಸಿ 600 ಗೋಲುಗಳ ಸಾಧನೆ

ಫುಟ್ ಬಾಲ್ ಮಾಂತ್ರಿಕ ಮೆಸ್ಸಿ 600 ಗೋಲುಗಳ ಸಾಧನೆ

ಬಾರ್ಸಿಲೋನಾ, ಮೇ. 2,ನ್ಯೂಸ್ ಎಕ್ಸ್ ಪ್ರೆಸ್: ಮೊದಲ ಹಂತದ ಚಾಂಪಿಯನ್ಸ್ ಲೀಗ್ ಸೆಮಿಫೈನಲ್ ನಲ್ಲಿ ಫುಟ್ ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ 2 ಗೋಲುಗಳನ್ನು ಗಳಿಸಿ ಬಾರ್ಸಿಲೋನಾ ಪರ 600 ಗೋಲುಗಳನ್ನು ಹೊಡೆದ ಹೊಸ ಮೈಲುಗಲ್ಲು ತಲುಪಿದರು. ಮೆಸ್ಸಿ ಅದ್ಭುತ ಆಟದಿಂದ ಬಾರ್ಸಿಲೋನಾ ತಂಡ ಲಿವರ್ಪೂಲ್ ತಂಡವನ್ನು 3-0 ಗೋಲುಗಳಿಂದ ಬಗ್ಗು ಬಡಿಯಿತು.

ಆರಂಭದಲ್ಲಿ ತಮ್ಮ ಮಾಜಿ ಕ್ಲಬ್ ವಿರುದ್ಧ 26ನೇ ನಿಮಿಷದಲ್ಲಿ ಗೋಲು ಗಳಿಸಿದರು. ಬಳಿಕ ಮೆಸ್ಸಿ ಆಟ ಮುಗಿಯಲು 15 ನಿಮಿಷಗಳಿದ್ದಾಗ ಮತ್ತೊಂದು ಗೋಲು ಗಳಿಸಿ ತಂಡದ ಮುನ್ನಡೆ ಹಿಗ್ಗಿಸಿದರು. 82ನೇ ನಿಮಿಷದಲ್ಲಿ ಫ್ರೀಕಿಕ್ ಮೂಲಕ ಇನ್ನೊಂದು ಗೋಲು ಹೊಡೆದು ಈ ಐತಿಹಾಸಿಕ ಸಾಧನೆ ಮಾಡಿದರು.

ಪಂದ್ಯದುದ್ದಕ್ಕೂ ಅದರಲ್ಲೂ ಮುಖ್ಯವಾಗಿ ಉತ್ತರಾರ್ಧದಲ್ಲಿ ಪ್ರಾಬಲ್ಯ ಮೆರೆದರೂ, ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿದ ಲಿವರ್ಪೂಲ್ ಸೋಲೊಪ್ಪಿಕೊಳ್ಳಬೇಕಾಯಿತು.

ಫ್ರೆಶ್ ನ್ಯೂಸ್

Latest Posts

Featured Videos