ಚೀನಾದಲ್ಲಿ ಪಾದ ಪೂಜೆ…!

ಚೀನಾದಲ್ಲಿ ಪಾದ ಪೂಜೆ…!

ಚೀನಾ, ನ. 8 : ಸಂಸ್ಥೆಯಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದ ಸಿಬ್ಬಂದಿಯನ್ನು ಸಾಲಾಗಿ ಕುಳಿರಿಸಿ ಇಬ್ಬರು ಹಿರಿಯ ಅಧಿಕಾರಿಗಳು ಎಲ್ಲರ ಪಾದ ತೊಳೆದು ಗೌರವ ಸಲ್ಲಿಸಿ, ಸಿಬ್ಬಂದಿಯ ಪ್ರಾಮಾಣಿಕ ಕೆಲಸಕ್ಕೆ ಚೀನಾ ಮೇಲಾಧಿಕಾರಿಗಳು ಶಹಬ್ಬಾಸ್ ಗಿರಿ ಹೇಳಿದರು.
ಸಿಬ್ಬಂದಿ ಒಳ್ಳೆಯ ಕೆಲಸ ಮಾಡಿ ಸಂಸ್ಥೆಗೆ ಲಾಭ ತಂದರೆ ಪ್ರಶಸ್ತಿ ನೀಡಬುದು ನೋಡಿದ್ದೇವೆ. ಸನ್ಮಾನ ಮಾಡಬಹುದು, ಸಂಬಳ ಹೆಚ್ಚು ಮಾಡಬಹುದು, ಆದರೆ, ಚೀನಾದ ಕಂಪನಿಯೊಂದು ಎಲ್ಲಕ್ಕಿಂತ ಭಿನ್ನ.

ಸಂಸ್ಥೆ ಒಳ್ಳೆಯ ಕೆಲಸ ಮಾಡಿದ ಸಿಬ್ಬಂದಿಗೆ ಜೀವಮಾನದಲ್ಲೇ ಅತೀ ದೊಡ್ಡ ಗಿಫ್ಟ್ ಕೊಟ್ಟಿದೆ. ಉಸಿರು ಇರುವ ತನಕ ಸಿಬ್ಬಂದಿ ಮರೆಯದೇ ಇರುವಂತಹ ಗೌರವವದು. ಅದೇನು ಗೊತ್ತಾ…? ಪಾದಪೂಜೆ… ಪಾದಪೂಜೆ ಯಾರು ಮಾಡಿದ್ದು ಗೊತ್ತಾ…? ಸಂಸ್ಥೆಯ ಉನ್ನತ ಅಧಿಕಾರಿಗಳು…!  ಅಚ್ಚರಿಯಾದರೂ ನಿಜ. ಚೀನಾದ ಶಾಂಡೋಂಗ್ ಪ್ರಾಂತ್ಯದ ಜಿನಾನ್ನಲ್ಲಿ ಸಂಸ್ಥೆಯ ಪ್ರಶಸ್ತಿ ಪ್ರದಾನ ಸಮಾರಂಭ ಇಂತಹದ್ದೊಂದು ಭಾವನಾತ್ಮಕ ಸನ್ನಿವೇಶಕ್ಕೆ ಸಾಕ್ಷಿಯಾಯಿತು.

ಫ್ರೆಶ್ ನ್ಯೂಸ್

Latest Posts

Featured Videos