ಚಳಿಗಾಲದಲ್ಲಿ ಪಾದದ ರಕ್ಷಣೆ

ಚಳಿಗಾಲದಲ್ಲಿ ಪಾದದ ರಕ್ಷಣೆ

ಬೆಂಗಳೂರು, ನ. 27: ಚಳಿಗಾಲ ಬರುತ್ತಿದ್ದಂತೆ ಅನೇಕ ಜನರಿಗೆ ಅದರಲ್ಲೂ ಮಹಿಳೆಯರಿಗೆ ತಮ್ಮ ಪಾದಗಳದ್ದೇ ಚಿಂತೆ. ಕೆಲವರಿಗೆ ಕಾಲು ಎಲ್ಲಾ ಸೀಸನ್ ಗಳಲ್ಲೂ ಒಡೆದರೆ ಮತ್ತೆ ಕೆಲವರಿಗೆ ಚಳಿಗಾಲದಲ್ಲಿ ಮಾತ್ರ ಕಾಲು ಒಡೆಯುತ್ತದೆ. ಒಡಕು ಕಾಲನ್ನು ನೋಡಲು ಯಾರು ತಾನೇ ಇಷ್ಟ ಪಡುತ್ತಾರೆ? ಅಷ್ಟೇ ಅಲ್ಲ ಒಡೆದ ಕಾಲುಗಳನ್ನು ನೋವು ಅದನ್ನು ಅನುಭವಿಸಿದವರಿಗಷ್ಟೇ ಗೊತ್ತಿರಲು ಸಾಧ್ಯ. ಸಾಮಾನ್ಯವಾಗಿ ಚಳಿಗಾಲದಲ್ಲಿ ಪಾದದ ರಕ್ಷಣೆ ಬಹಳ ಮುಖ್ಯ. ಬಿರುಕು ಬಿಟ್ಟ ಪಾದಗಳು ಯಮ ಹಿಂಸೆ ನೀಡುತ್ತವೆ. ಚಳಿಗಾಲ ಮುಗಿದ್ರೆ ಸಾಕು ಎನ್ನುವ ಪರಿಸ್ಥಿತಿ ಕೆಲವರಿಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ.

ಸಮಯ- ಸಮಯಕ್ಕೆ ಪೆಡಿಕ್ಯೂರ್ ಮಾಡಿಕೊಳ್ಳಬೇಕು. ಅದಕ್ಕಾಗಿ ನೀವು ಬ್ಯೂಟಿ ಪಾರ್ಲರ್ ಗೆ ಹೋಗಬೇಕೆಂದೇನಿಲ್ಲ. ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದು. ಬಿಸಿ ನೀರಿಗೆ ಸ್ವಲ್ಪ ಶಾಂಪೂ ಬೆರೆಸಿ ಅದರಲ್ಲಿ ಪಾದವನ್ನಿಡಿ. ಇದರಿಂದ ಡೆಡ್ ಸ್ಕಿನ್ ದೂರವಾಗುವ ಜೊತೆಗೆ ಬಿರುಕಿನಲ್ಲಿ ಸಿಲುಕಿರುವ ಕೆಸರು ಹೋಗುತ್ತದೆ.

ಅರಿಶಿನ ಹಾಗೂ ಆಲಿವ್ ಆಯಿಲ್ ಒಡಕು ನಿವಾರಣೆಗೆ ಮನೆ ಮದ್ದು. ಅರಿಶಿನ ಪುಡಿಗೆ ಆಲಿವ್ ಆಯಿಲ್ ಸೇರಿಸಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ನಂತರ ಅದನ್ನು ಒಡೆದ ಪಾದಗಳಿಗೆ ಹಚ್ಚಿಕೊಳ್ಳಿ. ಕೆಲವು ದಿನ ಹೀಗೆ ಮಾಡುತ್ತ ಬಂದಲ್ಲಿ ನಿಮ್ಮ ಪಾದ ಕೋಮಲ ಹಾಗೂ ಮೃದುವಾಗುತ್ತದೆ.

ವ್ಯಾಕ್ಸ್ ಮತ್ತು ತೆಂಗಿನೆಣ್ಣೆ ಸೇರಿಸಿ ಮಾಡಿದ ಮಿಶ್ರಣವನ್ನೂ ನೀವು ಪಾದಗಳಿಗೆ ಹಚ್ಚಬಹುದು. ಇದು ಪಾದಗಳ ಉರಿಯನ್ನು ಕಡಿಮೆ ಮಾಡುತ್ತದೆ. ವ್ಯಾಕ್ಸ್ ಹಾಗೂ ತೆಂಗಿನೆಣ್ಣೆಯನ್ನು ಸ್ವಲ್ಪ ಕುದಿಸಿ. ತಣ್ಣಗಾದ ನಂತರ ರಾತ್ರಿ ಹಚ್ಚಿ ಮಲಗುವುದು ಬಹಳ ಒಳ್ಳೆಯದು.

 

ಫ್ರೆಶ್ ನ್ಯೂಸ್

Latest Posts

Featured Videos