ಪುಟಾಣಿ ಮಕ್ಕಳಿಂದ ಫುಡ್ ಫೆಸ್ಟ್

ಪುಟಾಣಿ ಮಕ್ಕಳಿಂದ ಫುಡ್ ಫೆಸ್ಟ್

   ದೊಡ್ಡಬಳ್ಳಾಪುರ, ನ. 16: ಕಡಿಮೆ ಬೆಲೆಯಲ್ಲಿ ತರೆಹೆವಾರಿ ತಿಂಡಿ, ತಿನಿಸು, ಪಾನೀಯಗಳ ಮಾರಾಟ ಮಕ್ಕಳಲ್ಲಿ ಉತ್ಸಾಹ ಪೋಷಕರಿಗೆ ಆನಂದ. ಇದು ಕಂಡುಬಂದಿದ್ದು, ನಗರದ ಹೊರವಲಯದಲ್ಲಿರುವ ಕೆಬಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ.

ಹೌದು ಮಕ್ಕಳ ದಿನಾಚರಣೆಯ ಅಂಗವಾಗಿ ಶಾಲೆಯಲ್ಲಿ ಮಕ್ಕಳ ಬೌದ್ಧಿಕ ಮಟ್ಟ ಹೆಚ್ಚಿಸುವ ಸಲುವಾಗಿ ಶಿಕ್ಷಣ ಸಂಸ್ಥೆ ಆಯೋಜನೆ ಮಾಡಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ. ಕಳೆದ ಎರಡು ವರ್ಷಗಳಿಂದ ಮಕ್ಕಳ ದಿನಾಚರಣೆಯನ್ನು ಮಕ್ಕಳ ಸಂತೆ ಹೆಸರಿನಲ್ಲಿ ನಡೆಸುತ್ತಿರುವ ಸಂಸ್ಥೆಯು ಮಕ್ಕಳಲ್ಲಿ ವ್ಯವಹಾರಿಕ ಜ್ಙಾನ ಹೆಚ್ಚಿಸುವ ಸಲುವಾಗಿ ಇಂತಹ ಒಂದು ಪ್ರಯೋಗ ಮಾಡುತ್ತಿದೆ. ಮಕ್ಕಳ ಸಂತೆಯಲ್ಲಿ ಮಕ್ಕಳೆ ತಯಾರು ಮಾಡಿಕೊಂಡು ಬಂದ ಆಹಾರ ತಿಂಡಿ ತಿನಿಸುಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಮೂಲಕ ಅದರಿಂದ ಬಂದ ಲಾಭಾಂಶವನ್ನು ವಿಕಲಚೇತನ ಅನಾಥ ಮಕ್ಕಳಿಗೆ ನೀಡುವ ಮೂಲಕ ಸಾರ್ಥಕತೆ ಮೆರೆದಿದೆ.

ಮಕ್ಕಳ ಸಂತೆಯಲ್ಲಿ ವಿವಿಧ ಬಗೆಯ ಹಣ್ಣುಗಳು ಫ್ರೂಟ್ ಸಲಾಡ್ ಸೇರಿದಂತೆ ಚಿರುಮುರಿ, ಪಾನಿಪೂರಿ ಕಾಫಿ, ಟೀ, ಪಲಾವ್, ಹೋಳಿಗೆ ಚಿಕನ್ ಬಿರಿಯಾನಿ ಮತ್ತು ತಂಪಾದ ಪಾನೀಯಗಳನ್ನು ಮಾರಾಟ ಮಾಡಿಸುವ ಮೂಲಕ ಶಿಕ್ಷಣ ಸಂಸ್ಥೆ ವಿಶಿಷ್ಟ ಪ್ರಯೋಗ ಮಾಡಿದೆ.

ಪತ್ರಿಕೆಯೊಂದಿಗೆ ಮಾತನಾಡಿದ  ಪೋಷಕರಾದ ಶಬಾಬ್ ಜಹೀರ್ ಮತ್ತು ಲಕ್ಷ್ಮೀಪತಿಯವರು ಇದೊಂದು ವಿಭಿನ್ನ ಪ್ರಯೋಗ ಇದರಿಂದ ಮಕ್ಕಳಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಎಂಬ ಮನೋಭಾವನೆ ಬೆಳೆಯುತ್ತದೆ ಎಂದು ಶ್ಲಾಘಿಸಿದರು. ವಿದ್ಯಾರ್ಥಿನಿ ಅಪೇಕ್ಷ ಮಾತನಾಡಿ, ಇದೊಂದು ಅವಿಸ್ಮರಣೀಯ ಸಮಯ ಇದರಿಂದ ನಮಗೆ ಪಠ್ಯೇತರ ವಿಷಯದಲ್ಲಿ ಹೊಸ ಬಗೆಯ ಅನುಭವವಾಗುತ್ತಿದೆ ಎಂದು ಹೇಳುತ್ತಾಳೆ.

ಸಂಸ್ಥೆಯ ನಿರ್ದೇಶಕ ಅಬ್ಬಾಸ್ ಮಾತನಾಡಿ, ಕಳೆದ 2 ವರ್ಷಗಳಿಂದ ವಿದ್ಯಾರ್ಥಿಗಳಿಗೆ ವಿಭಿನ್ನ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂಬ ಕಾರಣಕ್ಕೆ ಇಂತಹ ಒಂದು ಪ್ರಯೋಗವನ್ನು ನಮ್ಮ ಸಂಸ್ಥೆಯ ಶಿಕ್ಷಕರು ಆಡಳಿತ ಮಂಡಳಿ ಇದನ್ನು ಮಾಡುತ್ತಿದ್ದೇವೆ. ಇದರಲ್ಲಿ ಪೋಷಕರು ಸಹ ಭಾಗವಹಿಸಿ ತಮ್ಮ ಮಕ್ಕಳಲ್ಲಿ ಉತ್ಸಾಹವನ್ನು ತುಂಬುತ್ತಿದ್ದಾರೆ. ಇದರಿಂದ ಬಂದ ಲಾಭವನ್ನು ವಿಕಲಚೇತನ ಅನಾಥ ಮಕ್ಕಳ ಆಶ್ರಮಕ್ಕೆ ನೀಡುತ್ತಿದ್ದೇವೆ  ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos