ಫೋನಿ: ಒಡಿಶಾದಲ್ಲಿ ನೀಟ್ ಪರೀಕ್ಷೆ ಮುಂದಕ್ಕೆ

ಫೋನಿ: ಒಡಿಶಾದಲ್ಲಿ ನೀಟ್ ಪರೀಕ್ಷೆ ಮುಂದಕ್ಕೆ

ನವದೆಹಲಿ, ಮೇ. 4, ನ್ಯೂಸ್ ಎಕ್ಸ್ ಪ್ರೆಸ್:  ನೆನ್ನಯಿಂದ ಒರಿಸ್ಸಾದಲ್ಲಿ ಭಾರೀ ಫೋನಿ ಚಂಡಮಾರುತದ ಹೊಡೆತದಿಂದ ತತ್ತರಿಸಿದೆ. ಒರಿಸ್ಸಾದಲ್ಲಿ ಮೇ 5ಕ್ಕೆ ನಿಗದಿಯಾಗಿರುವ 2019ರ ನೀಟ್ (ನ್ಯಾಶನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ ) ಪರೀಕ್ಷೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇಂದು ಪ್ರಕಟಿಸಿದೆ.

ಫೋನಿ ಚಂಡಮಾರುತ ಸಂತ್ರಸ್ತರ ಪುನರ್ ವಸತಿ ಹಾಗೂ ತೀವ್ರವಾಗಿ ಹಾನಿಗೊಂಡಿರುವ ಪೌರ ಮೂಲ ಸೌಕರ್ಯವನ್ನು ಪುನರ್ ಸ್ಥಾಪಿಸುವ ಕೆಲಸ ಸಮರೋಪಾದಿಯಲ್ಲಿ ಸಾಗುತ್ತಿರುವುದರಿಂದ ನೀಟ್ ಪರೀಕ್ಷೆಯನ್ನು ಮುಂದಕ್ಕೆ ಹಾಕಬೇಕು ಎಂದು ಒಡಿಶಾ ಸರಕಾರ ಕೇಂದ್ರವನ್ನು ಕೋರಿತ್ತು.

ಆ ಪ್ರಕಾರ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಒಡಿಶಾದಲ್ಲಿ ನೀಟ್ ಪರೀಕ್ಷೆಯನ್ನು ಮುಂದಕ್ಕೆ ಹಾಕಿದೆ ಎಂದು ಎಚ್ ಆರ್ ಡಿ ಆರ್ ಸುಬ್ರಮಣ್ಯಮ್ ಟ್ವೀಟ್ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos