ಫೋನಿ ಸೈಕ್ಲೋನ್: ನವೀನ್ ಪಟ್ನಾಯಕ್ ಶ್ಲಾಘಿಸಿದ ಮೋದಿ!

ಫೋನಿ ಸೈಕ್ಲೋನ್: ನವೀನ್ ಪಟ್ನಾಯಕ್ ಶ್ಲಾಘಿಸಿದ ಮೋದಿ!

ಭುವನೇಶ್ವರ್, ಮೇ.6, ನ್ಯೂಸ್ ಎಕ್ಸ್ ಪ್ರೆಸ್: ಫೋನಿ ಸೈಕ್ಲೋನ್ ಪೀಡಿತ ಒಡಿಶಾದಲ್ಲಿ ಸೋಮವಾರ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರನ್ನು ಹಾಡಿ ಹೊಗಳಿದರು. “ನವೀನ್ ಪಟ್ನಾಯಕ್ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಜೊತೆಗೆ ಅವರು ನೀಡಿದ್ದ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿದ ಒಡಿಶಾ ಜನರ ನಡೆ ಕೂಡ ಶ್ಲಾಘನೀಯ” ಎಂದು ಮೋದಿ ಹೇಳಿದರು. ಫೋನಿ ಚಂಡಮಾರುತ ಪೀಡಿತ ಪ್ರದೇಶಕ್ಕೆ ಪ್ರಧಾನಿ ಮೋದಿ ಭೇಟಿ ಕೇಂದ್ರ ಸರ್ಕಾರವು ಕಳೆದ ವಾರ ಸೈಕ್ಲೋನ್ ಪೀಡಿತ ಒಡಿಶಾಕ್ಕೆ 1000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿತ್ತು. ಇದೀಗ ಮತ್ತೆ 1000 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಮೋದಿ ಹೇಳಿದ್ದಾರೆ. ಒಡಿಶಾದಲ್ಲಿ ಉಂಟಾದ ಫೋನಿ ಚಂಡಮಾರುತಕ್ಕೆ ಇದುವರೆಗೂ 34 ಜನ ಮೃತರಾಗಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಈಗಾಗಲೇ 10 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. 5000 ಆಶ್ರಯ ತಾಣಗಳನ್ನು ನಿರ್ಮಿಸಲಾಗಿದ್ದು, 1500 ಕ್ಕೂ ಹೆಚ್ಚು ಬಸ್ ಗಳ ಮೂಲಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಗಂಟೆಗೆ 200 ಕಿಮೀ. ವೇಗದಲ್ಲಿ ಗಾಳಲಿ ಬೀಸುತ್ತಿರುವುದರಿಂದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯುಂಟಾಗಿದೆ. 10,000 ಹಳ್ಳಿಗಳ ಸುಮಾರು ಒಂದು ಕೋಟಿಗೂ ಅಧಿಕ ಜನರು ಸೈಕ್ಲೋನ್ ಪರಿಣಾಮ ಎದುರಿಸುತ್ತಿದ್ದಾರೆ. ಒಡಿಶಾದ ಪ್ರಸಿದ್ಧ ಪುರಿಯ ಜಗನ್ನಾಥ ಮಂದಿರವೂ ಪುರಿ ಸೈಕ್ಲೋನ್ ನಿಂದ ಹಾನಿಯೊಳಗಾಗಿದೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos