ಪೋಕ್ಸೋ ಕಾಯ್ದೆಯಡಿ ಪುರಸಭೆ ಸಿಬ್ಬಂದಿ ಸೆರೆ

ಪೋಕ್ಸೋ ಕಾಯ್ದೆಯಡಿ ಪುರಸಭೆ ಸಿಬ್ಬಂದಿ ಸೆರೆ

ಕಾರವಾರ ,ಜು. 31 : ಪುರಸಭೆ ಸಿಬ್ಬಂದಿಯೊಬ್ಬರು 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ ಹಿನ್ನಲೆ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಕನ್ನಡ ಹಳಿಯಾಳ ತಾಲೂಕಿನ ಹಳಿಯಾಳದ ಮುರ್ಕವಾಡ ಗ್ರಾಮದ ನಿವಾಸಿ ಸಚಿನ್ ಹೊಳೆಪ್ಪ (24) ಬಂಧಿತ ಆರೋಪಿ. ಪುರಸಭೆಯಲ್ಲಿ ಜೆಸಿಬಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದನು. ತನ್ನ ಊರಿನ ಬಾಲಕಿಯೊಬ್ಬಳ ಮೇಲೆ ಅತ್ಯಚಾರ ನಡೆಸಿದ್ದನು. ಆದರೆ ಈ ಬಗ್ಗೆ ಬಾಲಕಿ ಯಾರಿಗೂ ತಿಳಿಸಿರಲಿಲ್ಲ.
ಕೆಲವು ದಿನಗಳ ಬಳಿಕ ಆರೋಗ್ಯ ಸಮಸ್ಯೆ ಕಂಡುಬಂದ ಕಾರಣಕ್ಕೆ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ವೇಳೆ ಆಕೆ ಗರ್ಭಿಣಿಯಾಗಿರುವುದು ಬಹಿರಂಗವಾಗಿದೆ.ವಿಷಯ ತಿಳಿದ ತಕ್ಷಣ ಬಾಲಕಿಯನ್ನು ವಿಚಾರಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ. ನಂತರ ಪಾಲಕರು ಹಳಿಯಾಳದ ಜೀಜಾಮಾತಾ ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos