ಕುಂದನಗರಿ ಬೆಳಗಾವಿಯಲ್ಲಿ ವಿಮಾನಯಾನ ಆರಂಭ..!

ಕುಂದನಗರಿ ಬೆಳಗಾವಿಯಲ್ಲಿ ವಿಮಾನಯಾನ ಆರಂಭ..!

ಬೆಳಗಾವಿ: ಸುಮಾರು ವರ್ಷಗಳಿಂದ ನೆಲಗುದಿಗೆ ಬಿದ್ದಿದ್ದ ಬೆಳಗಾವಿ ವಿಮಾನ ನಿಲ್ದಾಣದಿಂದ ಕೆಲವು ಪ್ರಮುಖ ಸ್ಥಳಗಳಿಗೆ ವಿಮಾನ ಸಂಚಾರ ಹಲವು ಸಮಸ್ಯೆಗಳಿಂದ ವಿಮಾನಯಾನ ಸ್ಥಗಿತಗೊಂಡಿತ್ತು. ಕುಂದಾ ನಗರಿ ಬೆಳಗಾವಿಯಿಂದ ದೆಹಲಿಗೆ ನೇರ ವಿಮಾನ ಸೇವೆ ಪುನರಾರಂಭಗೊಂಡಿದ್ದು ಬೆಳಗಾವಿ ಜನಕ್ಕೆ ಸಂತಸ ಮೂಡಿಸಿದೆ. ಇನ್ನು ವಿಶೇಷವೆಂದರೆ ಅಧಿಕಾರಿಯೊಬ್ಬರು ವಿಮಾನಯಾನ ಪ್ರಯಾಣಿಕರನ್ನು ಕನ್ನಡದಲ್ಲೇ ಸ್ವಾಗತಿಸಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಅಕ್ಷಯ ಪಾಟೀಲ್ ಅವರು ಪ್ರಯಾಣಿಕರನ್ನು ಕನ್ನಡದಲ್ಲಿ ಸ್ವಾಗತಿಸಿದರು. ನೇರ ವಿಮಾನ ಸೇವೆಗೆ ಕಾರಣರಾದ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಅಭಿನಂದಿಸಲಾಯಿತು.
ಇನ್ಮುಂದೆ ದೆಹಲಿಗೆ ಹೋಗಬೇಕಾದರೆ ತೊಂದರೆ ಪಡಬೇಕಾಗಿಲ್ಲ ಬೆಳಗಾವಿಯಿಂದ ದೆಹಲಿಗೆ ಕೇವಲ 2.10 ನಿಮಿಷದಲ್ಲಿ ತಲುಪುತ್ತೇವೆ. ಹಾಗಾಗಿ ಆರಾಮಾಗಿ ಕುಳಿತುಕೊಂಡು 2 ಗಂಟೆ 10 ನಿಮಿಷದಲ್ಲಿ ದೆಹಲಿ ತಲಪುತ್ತೇವೆ, ಇದು ಕುಂದನಗರಿ ಬೆಳಗಾವಿಗೆ ತಂದ ಜಯ ಎಂದು ಅಕ್ಷಯ್ ಹೇಳಿದರು.
ದೀರ್ಘಾವಧಿಯ ನಂತರ ಅಕ್ಟೋಬರ್ 5 ರಿಂದ ಬೆಳಗಾವಿ ಮತ್ತು ದೆಹಲಿ ನಡುವಿನ ದೈನಂದಿನ ವಿಮಾನ ಸಂಚಾರ ಪ್ರಾರಂಭವಾಗಿದೆ. ವಿಮಾನವು ದೆಹಲಿಯಿಂದ ಪ್ರತಿದಿನ ಮಧ್ಯಾಹ್ನ 3.45 ಕ್ಕೆ ಟೇಕ್ ಆಫ್ ಆಗಲಿದ್ದು, ಸಂಜೆ 6.05 ಕ್ಕೆ ಬೆಳಗಾವಿ ತಲುಪಲಿದೆ. ಬೆಳಗಾವಿ-ದೆಹಲಿ ವಿಮಾನವು ಬೆಳಗಾವಿಯಿಂದ ಸಂಜೆ 6.35 ಕ್ಕೆ ಹೊರಟು ದೆಹಲಿಯನ್ನು ರಾತ್ರಿ 9 ಕ್ಕೆ ತಲುಪಲಿದೆ. ಇದು ರಾಜ್ಯದ ಜನತೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ವರದಿಗಾರ, ಎ ಚಿದಾನಂದ.

ಫ್ರೆಶ್ ನ್ಯೂಸ್

Latest Posts

Featured Videos