ಜಾಗಿಂಗ್ ನೊಂದಿಗೆ ಕಸ ಸಂಗ್ರಹಿಸುವ ಹೊಸ ಟ್ರೆಂಡ್ ‘ಫ್ಲಾಗಿಂಗ್’

ಜಾಗಿಂಗ್ ನೊಂದಿಗೆ ಕಸ ಸಂಗ್ರಹಿಸುವ ಹೊಸ ಟ್ರೆಂಡ್ ‘ಫ್ಲಾಗಿಂಗ್’

ಬೆಂಗಳೂರು, ಏ. 26, ನ್ಯೂಸ್ ಎಕ್ಸ್ ಪ್ರೆಸ್: ಓಡುವುದರ ಜೊತೆಗೆ ಕಸ ತೆಗೆಯುವುದು ಈಗ ಸ್ವೀಡನ್ ನಲ್ಲಿ ಹುಟ್ಟಿಕೊಂಡಿರುವ ಹೊಸ ಟ್ರೆಂಡ್. ಸಂಜೆ ಹೊತ್ತಿನಲ್ಲಿ ಜಾಗಿಂಗ್ ಗೆ ಬರುವರನ್ನ ಬಳಸಿಕೊಂಡು ಕಸವನ್ನ ತೆಗೆಯಲಾಗುತ್ತದೆ. ಈ ಕಸಗಳನ್ನ ಒಂದು ಬ್ಯಾಗ್ ನಲ್ಲಿ ಸಂಗ್ರಹಿಸಿಕೊಂಡು ಜಾಗಿಂಗ್ ನಲ್ಲಿ ಪಾಲ್ಗೊಂಡವರು ತಾವು ಎಲ್ಲಿ ಜಾಗಿಂಗ್ ಆರಂಭಿಸಿರುತ್ತಾರೋ ಅಲ್ಲಿಗೆ ವಾಪಾಸಾಗಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಹಾಕಬೇಕು. ನಂತರ ಅದನ್ನ ಶೇಖರಿಸಿದ ಜಾಗದಿಂದ ವಿಲೇವಾರಿ ಮಾಡಲಾಗುತ್ತದೆ. ಜಾಗಿಂಗ್ ಮಾಡುವಾಗ ಮಾರ್ಗ ಮಧ್ಯೆದಲ್ಲಿ ಕಾಣುವ ಕಸವನ್ನ ತೆಗೆದುಕೊಂಡು ಬ್ಯಾಗ್ ಗೆ ಹಾಕಿಕೊಳ್ಳುವುದಕ್ಕೆ ಪ್ಲಾಗಿಂಗ್ ಎಂದು ಕರೆಯಲಾಗುತ್ತದೆ. ಇಂತಹದ್ದೊಂದು ಅಭಿಯಾನವನ್ನ ಸ್ವೀಡನ್ ನ ಎರಿಕ್ ಅಲ್ ಸ್ಟೋಮ್ 2016 ನೇ ಇಸವಿಯಲ್ಲಿ ಅರೆ ಎಂಬ ನಗರದಲ್ಲಿ ಅಲ್ಫೈನ್ ಸ್ಕೈಯಿಂಗ್ ವರ್ಡ್ ಚಾಂಪಿಯನ್ ಎಂಬ ಹೆಸರಿನಲ್ಲಿ ಈ ಅಭಿಯಾನವನ್ನ ಆರಂಭಿಸಿದ್ದರು. ಅದು ಇಂದು ಎಲ್ಲೆಡೆ ಹಬ್ಬಿದೆ.

ಫ್ರೆಶ್ ನ್ಯೂಸ್

Latest Posts

Featured Videos