ಮೀನುಗಳಿಗೆ ಮುಗ್ಗಿ ಬಿದ್ದ ಮಡಿಕೇರಿ ಜನ

ಮೀನುಗಳಿಗೆ ಮುಗ್ಗಿ ಬಿದ್ದ ಮಡಿಕೇರಿ ಜನ

ಮಡಿಕೇರಿ, ಆ.25 : ಮುಂಗಾರು ಮಳೆಯ ಆರಂಭದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ನಿರ್ಬಂಧ ಹೇರಲಾಗಿದ್ದ ಹಿನ್ನೆಲೆಯಲ್ಲಿ ಸಮುದ್ರ ಮೀನು ಮಾರುಕಟ್ಟೆಗೆ ಬಾರದ ಕಾರಣ ಮೀನುಗಳ ದರ ಕೆ.ಜಿ.ಯೊಂದಕ್ಕೆ 200-250 ತನಕ ತಲುಪಿತ್ತು.
ನಾಪೋಕ್ಲುಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಬಗೆಯ ಸಮುದ್ರದ ಮೀನುಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡಿದ ಹಿನ್ನೆಲೆಯಲ್ಲಿ ಮೀನನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದರು.
ಕೈಗೆಟುಕದ ಮೀನುಗಳ ಬೆಲೆಯಿಂದಾಗಿ ಸಹಜವಾಗಿ ಮಾಂಸಹಾರಿಗಳು ಬೇಸರಗೊಂಡಿದ್ದರು. ಆದರೆ ನಾಪೋಕ್ಲು ವ್ಯಾಪ್ತಿಯಲ್ಲಿ ಶನಿವಾರ ಸಮುದ್ರದ ಮೀನುಗಳ ಮಾರಾಟದಲ್ಲಿ ಇಳಿಕೆಯಾಗಿತ್ತು. ಮೀನುಗಳ ದರ ಕೆ.ಜಿ.ಯೊಂದಕ್ಕೆ 80-100 ರುಪಾಯಿಗಳ ಒಳಗೆ ಇತ್ತು. ಇದರಿಂದಾಗಿ ಹಸಿ ಮೀನು ಕೊಳ್ಳಲು ಗ್ರಾಹಕರು ಮುಗಿಬಿದ್ದರು. ಮೀನುಗಳ ಮಾರಾಟವು ಭರ್ಜರಿಯಾಗಿ ನಡೆಯಿತು.

ಫ್ರೆಶ್ ನ್ಯೂಸ್

Latest Posts

Featured Videos