ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ!

ರಾಜ್ಯದಲ್ಲಿ ಕೊರೊನಾಗೆ ಮೊದಲ ಬಲಿ!

ಬೆಂಗಳೂರು: ಕಳೆದ ಒಂದು ವರ್ಷದಿಂದ ತಣ್ಣಗಾಗಿದ್ದ ಕೊರೊನಾ ಈಗ ಕೋವಿಡ್‌ ಉಪತಳಿ JN1 ರೂಪದಲ್ಲಿ ದಾಳಿಯಿಟ್ಟಿದೆ. ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಪರೀಕ್ಷೆಗೆ ಒಳಪಡಿಸಲಾದ 727 ಮಾದರಿಯಲ್ಲಿ 44 ಮಂದಿಯಲ್ಲಿ ಸೋಂಕು ದೃಢವಾಗಿದೆ.

ಕೊರೋನಾ ಪ್ರಕರಣಗಳು ಹೆಚ್ಚುವ ಭೀತಿ ನಡುವೆಯೇ ರಾಜ್ಯದಲ್ಲಿ ಮೊದಲ ಬಲಿಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಡಿಸೆಂಬರ್‌ 15ರಂದು  ಈ ಸಾವಾಗಿದ್ದು,  ಡಿಸೆಂಬರ್ 14 ಮಲ್ಲಿಗೆ  ಆಸ್ಪತ್ರೆಗೆ ದಾಖಲಾಗಿದ್ರು ಕೊರೊನಾ ಜೊತೆಗೆ ಅವರಿಗೆ  ಹಾರ್ಟ್ ಮತ್ತು ಟಿಬಿ ಇನ್ಪೇಕ್ಷನ್ ಇತ್ತು ಇತರ ಆರೋಗ್ಯ ಸಮಸ್ಯೆಗಳು ಇತ್ತು ಎಂದಿದ್ದಾರೆ.

ಕೇಂದ್ರ ಆರೋಗ್ಯ ಸಚಿವರ ಜೊತೆ ಸಭೆ ನಡೆಸಲಾಯ್ತು. ಕೇಂದ್ರ ಸರ್ಕಾರ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ. JN1 ತಳಿ ಒಮೈಕ್ರಾನ್ ನಿನ ಉಪತಳಿ. ಈ ತಳಿ ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಆಗಸ್ಟ್ ನಲ್ಲಿ ಮೊದಲು ಕಾಣಿಸಿಕೊಂಡಿತ್ತು. ಇದು ವೇಗವಾಗಿ ಹರಿಡಿತ್ತು. ಈ ತಳಿ ತುಂಬಾ ಹಾನಿಕರಿಕ ಅಲ್ಲ. ಸಾವಿನ ಪ್ರಮಾಣ ಕಡಿಮೆ. ಕೇಂದ್ರ ಇದ್ರ ಬಗ್ಗೆ ಅಂತಕ ಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಮುಂಜಾಗ್ರತಾ ಕ್ರಮ ಕೈಗೊಂಡರೆ ಉತ್ತಮ.

ಫ್ರೆಶ್ ನ್ಯೂಸ್

Latest Posts

Featured Videos