ಬೆಂಗಳೂರು: ಐಪಿಎಲ್ 2024ರ ಮೂರನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಜಯ ದಾಖಲಿಸಿದೆ. ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ 5 ವಿಕೆಟ್ ಕಳೆದುಕೊಂಡು 191 ರನ್ ಗಳಿಸಿತು. ತಂಡದ ಪರ ನಾಯಕ ರಿಷಬ್ ಪಂತ್ ಮತ್ತು ಡೇವಿಡ್ ವಾರ್ನರ್ ಅರ್ಧಶತಕ ಬಾರಿಸಿ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಚೆನ್ನೈ ಪರ ಮತಿಶಾ ಪತಿರಾನ 3 ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಗುರಿ ಬೆನ್ನಟ್ಟಿದ ಚೆನ್ನೈ ಪರ ಅಜಿಂಕ್ಯ ರಹಾನೆ 45 ರನ್ ಮತ್ತು ಎಂಎಸ್ ಧೋನಿ ಕೊನೆಯ ಓವರ್‌ಗಳಲ್ಲಿ ಕೇವಲ 16 ಎಸೆತಗಳಲ್ಲಿ 37 ರನ್ ಗಳಿಸಿದರೂ ಅಂತಿಮವಾಗಿ ಚೆನ್ನೈ 171 ರನ್ ಗಳಿಸಿ 20 ರನ್‌ಗಳಿಂದ ಸೋಲನುಭವಿಸಿತು. ಡೆಲ್ಲಿ ಪರ ಮುಖೇಶ್ ಕುಮಾರ್ 3 ಹಾಗೂ ಖಲೀಲ್ ಅಹ್ಮದ್ 2 ವಿಕೆಟ್ ಪಡೆದರು.
ಎಂಎಸ್ ಧೋನಿ ತಮ್ಮ ಹಳೇ ಖದರಿನ ಆಟ ಪ್ರದರ್ಶಿಸಿದರೂ ಸಿಎಸ್‌ಕೆಯನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ. ಈ ಮೂಲಕ ಈ ಆವೃತ್ತಿಯಲ್ಲಿ ಆರಂಭಿಕ 2 ಪಂದ್ಯ ಸೋತ ಬಳಿಕ ಡೆಲ್ಲಿ ಮೊದಲ ಗೆಲುವು ಸಾಧಿಸಿದೆ. ಇತ್ತ ಸತತ 2 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದ ಚೆನ್ನೈ ಮೊದಲ ಸೋಲು ಕಂಡಿದೆ.