ಪ್ರಥಮ ಖಾಸಗಿ ಗ್ರಂಥಾಲಯ

ಪ್ರಥಮ ಖಾಸಗಿ ಗ್ರಂಥಾಲಯ

ಬೇಲೂರು: ತಾಲೂಕಿನ ಚಿಕ್ಕಮಗಳೂರು ರಸ್ತೆಯ ಶೆಟ್ಟಿಗೆರೆ ಗ್ರಾಮದಲ್ಲಿ ಖಾಸಗಿಯಾಗಿ ಗ್ರಾಮಸ್ಥರು ಹಾಗೂ ಡಾ.ಅಂಬೇಡ್ಕರ್ ಯುವಕ ಸಂಘದಿಂದ ಡಾ.ಅಂಬೇಡ್ಕರ್ ಹೆಸರಿನಲ್ಲಿ ಗ್ರಂಥಾಲಯ ಶಾಖೆಯನ್ನು ಆರಂಭಿಸಲಾಯಿತು.
ಸರ್ಕಾರದ ಅನುದಾನ, ನೆರವು ಪಡೆಯದೆ ಪೂರ್ಣ ಪ್ರಮಾಣದಲ್ಲಿ ಖಾಸಗಿಯಾಗಿ ಆರಂಭಿಸಿರುವ ಈ ಗ್ರಂಥಾಲಯಕ್ಕೆ ಹಾಳುಬಿದ್ದ ಕಟ್ಟಡವನ್ನು ದುರಸ್ತಿಮಾಡಿಕೊಂಡು ಬಳಕೆ ಮಾಡಿಕೊಳ್ಳಲಾಗಿದ್ದು, ಪುಸ್ತಕಗಳನ್ನು ವಂತಿಗೆ ಸಂಗ್ರಹಿಸಿ ಖರೀದಿಸಲಾಗಿದೆ.
ನೂತನ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿದ ನಳಂದ ವಿಶ್ವವಿದ್ಯಾಲಯದ ಮುಖ್ಯಸ್ಥ (ಬಂತೇಜಿ) ಬೋದಿದತ್ತಾ ಮಹಾಥೇರಾ ಅವರು, ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಠಿಸಲಾರರು ಎನ್ನುವ ಡಾ.ಅಂಬೇಡ್ಕರ್ ನುಡಿಯಂತೆ ಕಳೆದುಹೋದ ಗತಕಾಲದ ವೈಭವದ ವಿಚಾರವನ್ನು ಅಧ್ಯಯನ ಮಾಡಲು ಗ್ರಂಥಾಲಯ ಸಹಕಾರಿಯಾಗಿವೆ. ಈ ನಿಟ್ಟಿನಲ್ಲಿ ಶೆಟ್ಟಿಗೆರೆ ಡಾ.ಅಂಬೇಡ್ಕರ್ ಯುವಕ ಸಂಘ ಹಾಗೂ ಗ್ರಾಮಸ್ಥರು ಸೇರಿ ಡಾ.ಅಂಬೇಡ್ಕರ್ ಹೆಸರಿನಲ್ಲಿ ಗ್ರಂಥಾಲಯ ಆರಂಭಿಸಿರುವುದು ಉತ್ತಮ ಬೆಳವಣಿಗೆ ಎಂದರು.
ಜಿ.ಪಂ.ಮಾಜಿ ಅಧ್ಯಕ್ಷೆ ಜಿ.ಟಿ.ಇಂದಿರಾ ಮಾತನಾಡಿ, ಗ್ರಂಥಾಲಯಗಳು ಜ್ವಾನದೇಗುಲಗಳಾಗುತ್ತಿದ್ದು ವಿದ್ಯಾರ್ಥಿಗಳು, ಪೋಷಕರು ಗ್ರಂಥಾಲಯಕ್ಕೆ ಆಗಮಿಸಿ ಪುಸ್ತಕ ಓದುವ ಮೂಲಕ ಜ್ವಾನಾರ್ಜನೆ ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಆದರಿಂದು ಮನೆಯಲ್ಲಿ ಧಾರಾವಾಹಿ ಹಾವಳಿಯಿಂದ ಪುಸ್ತಕ ಓದುವುದನ್ನೆ ಮರೆತಿದ್ದಾರೆ ಎಂದು ವಿಶಾಧಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos