ತಾಯ್ನಾಡಿಗೆ ಹಣ ರವಾನಿಸುವುದರಲ್ಲಿ ಚೀನಾ, ಮೆಕ್ಸಿಕೊಗಿಂತ ಭಾರತೀಯರೇ ಮುಂದು!

ತಾಯ್ನಾಡಿಗೆ ಹಣ ರವಾನಿಸುವುದರಲ್ಲಿ ಚೀನಾ, ಮೆಕ್ಸಿಕೊಗಿಂತ ಭಾರತೀಯರೇ ಮುಂದು!

ಬೆಂಗಳೂರು, ಏ. 17, ನ್ಯೂಸ್ ಎಕ್ಸ್ ಪ್ರೆಸ್: ಸಾಗರೋತ್ತರ ರಾಷ್ಟ್ರಗಳಲ್ಲಿ ನೆಲೆಸಿರುವ ಭಾರತೀಯರು ತಾಯ್ನಾಡಿಗೆ ಹೆಚ್ಚಿನ ಪ್ರಮಾಣದಲ್ಲಿ ಹಣ ರವಾನಿಸಿದ್ದಾರೆ ಎಂದು ವಲಸೆ ಮತ್ತು ಅಭಿವೃದ್ಧಿ ಕುರಿತ ವರದಿಯಲ್ಲಿ ವಿಶ್ವ ಬ್ಯಾಂಕ್ ತಿಳಿಸಿದೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರು 2018ರಲ್ಲಿ₹ 548 ದಶ ಲಕ್ಷ ಕೋಟಿ (79 ಬಿಲಿಯನ್ ಡಾಲರ್​) ರವಾನಿಸಿದ್ದಾರೆ. ಭಾರತದ ನಂತರದ ಸ್ಥಾನದಲ್ಲಿ ಚೀನಾ ($ 67 ಬಿಲಿಯನ್​), ಮೆಕ್ಸಿಕೊ ($ 36 ಬಿಲಿಯನ್​), ಫಿಲಿಪಿನ್ಸ್​ ($ 34 ಬಿಲಿಯನ್​) ಮತ್ತು ಈಜಿಪ್ತ್​ ($ 29 ಬಲಿಯನ್​) ಹಣ ಸ್ವೀಕರಿಸುವ ಮೂಲಕ ನಂತರದ ಸ್ಥಾದಲ್ಲಿವೆ.

ಕಳೆದ ಮೂರು ವರ್ಷಗಳಿಂದ ಭಾರತಕ್ಕೆ ಹರಿದು ಬರುತ್ತಿರುವ ಹಣದಲ್ಲಿ ಏರಿಕೆ ಆಗುತ್ತಿದೆ. 2016ರಲ್ಲಿ $ 67.7 ಬಿಲಿಯನ್​ ಹಾಗೂ 2017ರಲ್ಲಿ $ 65.3 ಬಿಲಿಯನ್​ ಕಳುಹಿಸಿದ್ದರು. ಇಂಧನ ಬೆಲೆ ತಗ್ಗುತ್ತಿರುವುದರಿಂದ ಕೊಲ್ಲಿ ರಾಷ್ಟ್ರಗಳಿಗೆ ವಲಸೆ ಹೋಗುವ ಜನರ ಪ್ರಮಾಣ ಕ್ಷೀಣಿಸುತ್ತಿದೆ. ಹೀಗಾಗಿ, 2019ರಲ್ಲಿ ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕತೆ ನಿಧಾನಗತಿಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಸೌದಿ ರಾಷ್ಟ್ರಗಳಲ್ಲಿನ ತೆಲೆದೂರಿರುವ ವಿದೇಶಿಗರ ತೆರವು ಹಾಗೂ ಸ್ಥಳೀಯರಿಗೆ ಆದ್ಯತೆಯಿಂದಾಗಿ ಪಾಕಿಸ್ತಾನದ ವಿದೇಶಿ ಹರಿವಿನ ಪ್ರಮಾಣ ವೃದ್ಧಿ ಶೇ 7ಕ್ಕೆ ಇಳಿಕೆ ಆಗಿದೆ. ನೆರೆಯ ಬಾಂಗ್ಲಾ ಸಹ ಶೇ 15ರಷ್ಟು ಬೆಳವಣಿಗೆ ಕಾಣುತ್ತಿದೆ. ಪೂರ್ವ ಏಷ್ಯಾ ಹಾಗೂ ಪೆಸಿಫಿಕ್ ರಾಷ್ಟ್ರಗಳಲ್ಲಿ ಅನಿವಾಸಿಗರ ಹಣ ರವಾನೆ ಶೇ 7ರಷ್ಟಿದ್ದರೇ ದಕ್ಷಿಣ ಏಷ್ಯಾ ರಾಷ್ಟ್ರಗಳ ಪಾಲು ಶೇ 15ರಷ್ಟು ವೃದ್ಧಿ ಕಾಣುತ್ತಿದೆ ಎಂದು ವಿಶ್ವ ಬ್ಯಾಂಕ್ ತಿಳಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos