ಗನ್ ಲೈಸೆನ್ಸ್ ನಾಗರಿಕರಿಗೆ ಫೈರಿಂಗ್ ತರಬೇತಿ

ಗನ್ ಲೈಸೆನ್ಸ್ ನಾಗರಿಕರಿಗೆ ಫೈರಿಂಗ್ ತರಬೇತಿ

ಕೊಟ್ಟೂರು: ಪ್ರಾಣ ರಕ್ಷಣೆಗಾಗಿ ಬಂದೂಕು ಪರವಾನಗಿ ಹೊಂದಿದ ಹರಪನಹಳ್ಳಿ ಮತ್ತು ಕೂಡ್ಲಿಗಿ ಠಾಣೆ ವಿಭಾಗಕ್ಕೆ ಒಳಪಡುವ ಸುಮಾರು 480 ನಾಗರಿಕರಿಗೆ ಕೂಡ್ಲಿಗಿ ಡಿವೈಎಸ್ಪಿ ಹರೀಶ್ ರಡ್ಡಿ ನೇತೃತ್ವದಲ್ಲಿ ಬಂದೂಕು ತರಬೇತಿ ನಡೆಸಲಾಯಿತು. ಭಾನುವಾರ ಕೊಟ್ಟೂರು ತಾಲೂಕಿನ ಕಂದಗಲ್ಲು ಅರಣ್ಯದ ಹುಲಿಗುಡ್ಡದ ಬಳಿ ಬಳ್ಳಾರಿ ಶಸ್ತ್ರಗಾರರು ಡಿ.ಎ.ಆರ್, ಡಿಎಸ್ಪಿ ಸರ್ದಾರ್ ಮತ್ತು ಸಿಬ್ಬಂದಿ ತರಬೇತಿ ನೀಡಿದರು.

ತರಬೇತಿಯಲ್ಲಿ ಬಂದೂಕನ್ನು ಫೈರ್ ಮಾಡುವ ವಿಧಾನ ಮತ್ತು ಯಾವ ಸಂದರ್ಭದಲ್ಲಿ ಉಪಯೋಗಿಸಬೇಕು ಹಾಗೂ ಅದರ ಜಾಗೃತಿ ಮತ್ತು ಇತರೆ ವಿಷಯಗಳನ್ನು ಲೈಸೆನ್ಸ್ ದಾರರಿಗೆ ಡಿವೈಎಸ್ಪಿ ತಿಳಿಸಿದರು. ಉಜ್ಜಿನಿ ಜಗದ್ಗುರು ಶಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಹರಪನಹಳ್ಳಿ ಮತ್ತು ಕೂಡ್ಲಿಗಿ ಠಾಣೆ ವಿಭಾಗದ ಗಣ್ಯ ನಾಗರಿಕರು ತರಬೇತಿ ಪಡೆದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ಸಿಪಿಐ ಮತ್ತು ಕೂಡ್ಲಿಗಿ ಪಿಎಸ್ಐ ಶರತ್ ಕುಮಾರ್, ಕೊಟ್ಟೂರು ಪಿಎಸ್ಐ ನಾಗಪ್ಪ, ಸಿಬ್ಬಂದಿಗಳು ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos