ಏರ್ ಶೋನಲ್ಲಿ ಅಗ್ನಿ ಅವಘಡ: 40 ಕ್ಕೂ ಹೆಚ್ಚು ಕಾರ್ ಗಳು ಧಗಧಗ

ಏರ್ ಶೋನಲ್ಲಿ ಅಗ್ನಿ ಅವಘಡ: 40 ಕ್ಕೂ ಹೆಚ್ಚು ಕಾರ್ ಗಳು ಧಗಧಗ

ಬೆಂಗಳೂರು: ವಿಶ್ವವಿಖ್ಯಾತ ಏರ್ ಶೋನಲ್ಲಿ ಮತ್ತೊಂದು
ಅವಘಡ ಸಂಭವಿಸಿದೆ. ಸೂರ್ಯಕಿರಣ್ ವಿಮಾನ ದುರಂತದ ಬೆನ್ನಲ್ಲೇ
ಮತ್ತೊಂದು ಆಘಾತ ಎದುರಾಗಿದೆ. ಏರ್
ಶೋ ಮುಂಭಾಗದ ಕಾರ್ ಪಾರ್ಕಿಂಗ್
ನಲ್ಲಿ ಬೆಂಕಿ ಕಾಣಿಸಿಕೊಂಡು ಬಾರಿ
ಅನಾಹುತ ಸಂಭವಿಸಿದೆ. ಎಲೆಕ್ಟ್ರಿಕ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ
ಕಾರೊಂದಕ್ಕೆ ಬೆಂಕಿ ಹತ್ತಿಕೊಂಡಿದೆ. ಬೆಂಕಿಯ್
ಜ್ವಾಲೆಗೆ ಪಕ್ಕದಲ್ಲಿದ್ದ 40ಕ್ಕೂ ಹೆಚ್ಚು ಕಾರುಗಳು
ಧಗಧಗ ಹೊತ್ತಿ ಉರಿದಿವೆ.

ಇಂದು ಮತ್ತು ನಾಳೆ ಸಾರ್ವಜನಿಕರಿಗೆ ವೈಮಾನಿಕ ಪ್ರದರ್ಶನ ನೀಡಲು ಅವಕಾಶ ಮಾಡಿಕೊಡಲಾಗಿತ್ತು. ಈ ಮಧ್ಯೆ ಸಾವಿರಾರು ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು. ಅವಘಡದಲ್ಲಿ 25ಕ್ಕೂ ಹೆಚ್ಚು ಕಾರುಗಳು ಅಗ್ನಿಗಾಹುತಿಯಾಗಿವೆ.

ಗೇಟ್ ನಂಬರ್ 5ರ ಬಳಿ ವಾಹನ ನಿಲುಗಡೆ ಮಾಡಿದ್ದ ಜಾಗದಲ್ಲಿ ಅಗ್ನಿ ಕಾಣಿಸಿಕೊಂಡಿದ್ದು ಸ್ಥಳಗ್ಗೆ 10 ಅಗ್ನಿಶಾಮಕ ವಾಹನಗಳು ಆಗಮಿಸಿತ್ತು.

ಆದರೆ ಮೊದಲು ಬೆಂಕಿ ಕಾಣಿಸಿಕೊಳ್ಳಲು
ಕಾರಣವೇನೆಂದು ತಿಳಿದಿರಲಿಲ್ಲ. ಆದರೆ ಅಲ್ಲಿಯೇ ಇದ್ದ
ಹುಲ್ಲಿಗೆ ಯಾರೋ ಕಿಡಿಗೇಡಿಗಳು ಬೆಂಕಿ
ಹಚ್ಚಿದ್ದ ಕಾರಣ ಹೊಗೆ ಆವರಿಸಿಕೊಂಡಿತ್ತು
ಎನ್ನುವ ಮಾಹಿತಿ ತಿಳಿದುಬಂದಿದೆ.

ಫೆಬ್ರವರಿ
19ರಂದು ಯಲಹಂಕದ ವಾಯುನೆಲೆಯಲ್ಲಿ ತಾಲೀಮಿನಲ್ಲಿ
ತೊಡಗಿದ್ದ ಸೂರ್ಯ ಕಿರಣ ಯುದ್ಧ
ವಿಮಾನದ ಪೈಲಟ್ ವಿಮಾನ ಡಿಕ್ಕಿಯಲ್ಲಿ
ಮೃತಪಟ್ಟಿದ್ದರು.

ಈ ಕಹಿ ಘಟನೆ ಮಾಸುವ
ಮುನ್ನವೇ ಏರೋ ಇಂಡಿಯಾ ಪಾರ್ಕಿಂಗ್
ಜಾಗದಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವು
ನಿಮಿಷಗಳ ಕಾಲ ಆತಂಕ ಸೃಷ್ಟಿಮಾಡಿತ್ತು.

ಬಳಿಕ ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಬೆಳಗ್ಗೆಯ ಒಂದು ಹಂತದ ವೈಮಾನಿಕ
ಪ್ರದರ್ಶನಕ್ಕೆ ತೆರೆ ಬಿದ್ದಿದೆ, ಮಧ್ಯಾಹ್ನದ
ಪ್ರದರ್ಶನ 2 ಗಂಟೆಯ ಬಳಿಕ ಆರಂಭವಾಗಲಿದೆ.

ಸಾವಿರಗಟ್ಟಲೆ ವಾಹನಗಳ ನಿಲ್ಲಿಸಿದ್ದ ಜಾಗದಲ್ಲಿ ದಟ್ಟ ಹೊಗೆ, ಬೆಂಕಿ ಆವರಿಸಿಕೊಂಡಿತ್ತು. ಬೆಂಕಿ ನಂದಿಸುವ ಕಾರ್ಯ ಅಗ್ನಿ ಶಾಮಕ ದಳ ಸಿಬ್ಬಂದಿಯಿಂದ ಮುಂದುವರೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos