ರಾಜಧಾನಿ ಅಗ್ನಿ ಅವಘಡಕ್ಕೆ 50 ಆಟೋಗಳು ಸುಟ್ಟು ಕರಕಲು

ರಾಜಧಾನಿ ಅಗ್ನಿ ಅವಘಡಕ್ಕೆ 50 ಆಟೋಗಳು ಸುಟ್ಟು ಕರಕಲು

ಬೆಂಗಳೂರು: ರಾಜಧಾನಿ ಬೆಂಗಳೂರು ಪ್ಲಾಸ್ಟಿಕ್ ಗೋದಮ್ಮ ಮತ್ತು ಪಕ್ಕದ ಶೆಡ್ ನಲ್ಲಿ ಅಗ್ನಿ ಅವಗಡ ಸಂಭವಿಸಿದ್ದು ಗೋದಾಮ ಪಕ್ಕದ ಜಾಗದಲ್ಲಿ ನಿಲ್ಲಿಸಿದ ಆಟೋಗಳು ಬೆಂಕಿಗಾಹುತಿಯಾಗಿವೆ. ನಾಯಂಡಳ್ಳಿ ಸಮೀಪ ಗಂಗನಹಳ್ಳಿ ಬಳ್ಳಿ ತಡೆಗತ್ತಿ ಘಟನೆ ನಡೆದಿದ್ದೇ ಶೆಡ್ನಲ್ಲಿ ಪಾರ್ಕಿಂಗ್ ಶುಲ್ಕ ನೀಡಿ ಚಾಲಕರು ಆಟೋ ನಿಲ್ಲಿಸಿದ್ದರು.

ರಿಜ್ವಾನ್ ಎಂಬುವವರಿಗೆ ಸೇರಿದ ಶೆಡ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಅಗ್ನಿ ಅವಘಡದಲ್ಲಿ ಸುಮಾರು 40 ರಿಂದ 50 ಆಟೋಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳ್ಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಂದಿಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ಇಂದಾಗಿ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳದಲ್ಲಿದ್ದ ಎಲ್ಲಾ ಆಟೋಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಈಗ ಹೀಗೆ ಆಗಿದೆ ಏನ್ ಮಾಡೋದು ಆಟೋ ಮಾಲೀಕರು ಕಂಗಾಲಾಗದ್ದಾರೆ.  ಜೀವನಕ್ಕೆ ಆಧಾರವಾಗಿದ್ದ ಆಟೋಗಳನ್ನು ಕಳೆದುಕೊಂಡ ಚಾಲಕರು ಕಂಗಾಲಾಗಿದ್ದು, ಕಷ್ಟ ಪಟ್ಟು ದುಡೀತಾ ಇದೀವಿ ಹೀಗೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ. ಆಟೋ ನಿಲ್ಲಿಸಿ ಮನೆಗೆ ಹೋಗಿದ್ವಿ ಈತರ ಆಗಿದೆ. ಮನೆ ಮುಂದೆ ಜಾಗ ಇಲ್ಲ ಅಂತ ದುಡ್ಡು ಕೊಟ್ಟು ನಾವು ನಿಲ್ಲಿಸ್ತಾ ಇದ್ವಿ, ಈಗ ಹೀಗೆ ಆಗಿದೆ ಏನ್ ಮಾಡೋದು ಅಂತ ಆಟೋ ಮಾಲೀಕರು ಕಣ್ಣೀರಿಟ್ಟಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos