ಅಗ್ನಿ ಅನಾಹುತ ಸಿಬ್ಬಂದಿಗೆ ಹೈಟೆಕ್ ತರಬೇತಿ

ಅಗ್ನಿ ಅನಾಹುತ ಸಿಬ್ಬಂದಿಗೆ ಹೈಟೆಕ್ ತರಬೇತಿ

ದೇವನಹಳ್ಳಿ, ಆ. 14: ಅಗ್ನಿ ಅನಾಹುತ ಅವಘಡಗಳು ಸಂಭವುಸಿದಾಗ ಮುನ್ನೆಚ್ಚರಿಕೆ ಹಾಗೂ  ನೈಜ ರಕ್ಷಣಾತ್ಮಕ ಕಾರ್ಯಾಚರಣೆ ನಡೆಸಲು ನುರಿತ ಅನುಭವಿ ಪಡೆ ನಿರ್ಮಾಣ ಮಾಡುವ ಉದ್ದೇಶದಿಂದ, ಕೆಂಪೇಗೌಡ  ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಮಾಧರಿ ಪ್ರಾತ್ಯಕ್ಷಿತೆ  ತಯಾರಿಸಿ ಅಗ್ನಿಶಾಮಕ ನಿಲ್ದಾಣದ ಸಿಬ್ಬಂದಿಗಳಿಗೆ ತರಬೇತಿ ನೀಡಲು ತಯಾರಿ ನಡೆಸಲಾಗಿದೆ.

ಎರಡನೇ ಟರ್ಮಿನಲ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಭವಿಷ್ಯದಲ್ಲಿ ಪ್ರಯಾಣಿಕರು ಮತ್ತು ವಿಮಾನಗಳ ಹಾರಾಟ ಕ್ಷಿಪ್ರಗತಿಯಲ್ಲಿ ಸಾಗುವ ಮತ್ತು ಹಾರಾಟದ ನಿರೀಕ್ಷೆಯಿದೆ. ಪ್ರಯಾಣಿಕರು ಮತ್ತು ವಿಮಾನಗಳ ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಆಡಳಿತ ಮಂಡಳಿಯ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದೆ.

“ಏರ್ ಕ್ರಾಫ್ಟ್ ಫೈರ್ ಫೈಟಿಂಗ್ ಮಾಡಲ್ಸ್” ನಿರ್ಮಿಸಲು ಆಸಕ್ತರಿಂದ ಕೆಐಎ ಆಡಳಿತ ಮಂಡಳಿ ಟೆಂಡರ್ ಆಹ್ವಾನಿಸಿದೆ. ಈ ಹಿಂದೆ ವರ್ಚುವಲ್ ರಿಯಾಲಿಟಿ ತ್ರೀಡಿ ವಿಡಿಯೋ ಮೂಲಕ ತರಬೇತಿ ನೀಡುವ ಪ್ರಕ್ರಿಯೆ ಕೈಗೊಂಡಿತ್ತಾದರೂ, ಅಂತಿಮವಗಿ ಎರಡನೆಯ ಟರ್ಮಿನಲ್ ಕಾರ್ಯಾರಂಭಕ್ಕೆ  ಮೊದಲೇ ಮಾದರಿ ವಿಮಾನ ಸ್ಥಾಪನೆಯಾಗುವ ಸಾದ್ಯತೆ ಇದೆ ಎಂದು  ಕೆಐಎ ಮೂಲಗಳು ತಿಳಿಸಿವೆ.

ಭಿನ್ನ ಅನಾಹುತ

ವಿಮಾನಗಳ ಬೆಂಕಿ ಅನಾಹುತಗಳು ಇತರೆ ಅನಾಹುತಗಳಿಗಿಂತ ಭಿನ್ನವಾಗಿರುತ್ತವೆ. ಒಮ್ಮೆ ಅನಾಹುತ ಸಂಭವಿದರೆ ಸಾವು ಬದುಕಿನ ಅಂತರ ಕ್ಷಣಿಕವಾಗಿರತ್ತದೆ. ಬೆಂಕಿ ಹತ್ತಿಕೊಂಡರೆ ಅತೀ ಶೀಘ್ರವಾಗಿ ಅನಾಹುತದಿಂದ ಪ್ರಯಾಣಿಕರನ್ನು ಪಾರು ಮಾಡಬೇಕು. ಹೀಗಾಗಿ ವಿಮಾನದ ಸಂರಚನೆಯ ಮಾಹಿತಿಯ ಜೊತೆಯಲ್ಲಿ ನೈಜ ಅನುಭವ ಅತ್ಯಗತ್ಯ ವಾಗಿರುತ್ತದೆ. ವಿಮಾನ ಇಂಧನ ಅತ್ಯಂತ ಪ್ರಜ್ವಲ ಸಾಮರ್ಥ್ಯ ಹೊಂದಿರುವ ಕಾರಣ ವಿಮಾನ ಇಂಧನ ಸೋರಿಕೆಯ ಬಗ್ಗೆ ಹೆಚ್ಚು ಗಮನ ಹರಿಸ ಬೇಕಾಗುತ್ತದೆ. ಸೂಕ್ತ ರೀತಿಯಲ್ಲಿ ಬೆಂಕಿ ಅನಾಹುತ ನಿಭಾಯಿಸಿದಿದ್ದರೆ ಅಗ್ನಿ ಅನಾಹುತಕ್ಕೆ ಒಳಗಾಗುವ ವಿಮಾನದ ಜೊತೆಯಲ್ಲಿ ಬೇರೆ ವಮಾನಗಳು ಹಾಗೂ ಬೇರೆ ಆಸ್ತಿಪಾಸ್ತಿಗಳಿಗೆ ಅಪಾಯ ತಡೆಗಟ್ಟುವುದು ಅನಿವಾರ್ಯ .

 

ಫ್ರೆಶ್ ನ್ಯೂಸ್

Latest Posts

Featured Videos