ಹುಲಿ ಉಗುರು ಲಾಕೆಟ್​ ಧರಿಸಿದವರ ವಿರುದ್ಧ ಎಫ್‌ಐಆರ್!

ಹುಲಿ ಉಗುರು ಲಾಕೆಟ್​ ಧರಿಸಿದವರ ವಿರುದ್ಧ ಎಫ್‌ಐಆರ್!

ಬೆಂಗಳೂರು: ಇತ್ತೀಚೆಗೆ ಕನ್ನಡ  ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10ರ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರು ಲಾಕೆಟ್ ಧರಿಸಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಸಂಬಂಧ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ.

ಇನ್ನು  ನಟ ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರ ಫೋಟೋಗಳು ಮತ್ತು ವೀಡಿಯೋಗಳು ಟ್ವಿಟರ್,ಫೇಸ್ಬುಕ್ ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಹಿನ್ನೆಲೆಯಲ್ಲಿ  ಡಿಸಿಎಫ್​ಓ ರವೀಂದ್ರ ಅವರು ಪ್ರತಿಕ್ರಿಯಿಸಿ, ಸದ್ಯದ ಪರಿಸ್ಥಿತಿಯಲ್ಲಿ ನಮಗೆ ಆ ತರಹದ ಯಾವುದೇ ದೂರು ಬಂದಿಲ್ಲ. ಬೇರೆಯವರು ಹಾಕಿದ್ದರೂ ಕಾನೂನು ಅಡಿಯಲ್ಲಿ ಅಪರಾಧ ಆಗುತ್ತೆ. ದೂರು ಬಂದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಡಕ್ ಆಗಿ  ಹೇಳಿದ್ದಾರೆ.

ಇನ್ನು ಹುಲಿ ಉಗುರಿನ ಚೈನ್ ಧರಿಸಿದವರಿಗೆ ಈಗಾಗಲೇ ಎದೆ ಢವ ಢವ ಶುರುವಾಗಿದೆ. ಇನ್ನು ಮಾರಾಟಗಾರರು ಕೂಡ ಜನರಿಗೆ ಮೋಸ ಮಾಡಲು ಹಸುವಿನ ಕೊಂಬನ್ನ ಹುಲಿ ಉಗುರು ಎಂದು ಮಾರಾಟ ಮಾಡಿರುತ್ತಾರೆ. ಒಟ್ಟಾರೆ ಹುಲಿಯ ಉಗುರು. ಹಲ್ಲು. ಚರ್ಮ ಹಾಗೂ ವನ್ಯಜೀವಿಯ ಯಾವುದೇ ಭಾಗ ಮಾರಾಟ ಮಾಡುವವರು ಸಿಕ್ಕರೆ ಕೂಡ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ಜೈಲಿಗೆ ಕಳಿಸುತ್ತೇವೆ ಎಂದು ಹೇಳುವ ಮೂಲಕ ಹುಲಿಯ ಹಲ್ಲು ಉಗುರಿನ ನೈಜತೆ ಬಗ್ಗೆ ಪರೀಶಿಲನೆ ಮಾಡಲಾಗುತ್ತೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ

ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಕೊಂಬು ಮೂಳೆ. ಕೂದಲು ಚರ್ಮ ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ಮತ್ತು ಮಾರಾಟ ಮಾಡುವುದು ತಪ್ಪಾಗುತ್ತದೆ. ಅಂತಹ ಸಂಗ್ರಹಗಳಿದ್ದರೆ ಕೂಡಲೇ ಅರಣ್ಯ ಇಲಾಖೆಗೆ ಒಪ್ಪಿಸಬೇಕು. ಇಲ್ಲವೇ ಇಲಾಖೆಯಿಂದ ಸೂಕ್ತ ಪ್ರಮಾಣ ಪತ್ರ ಪಡೆಯಬೇಕು. ಅಕ್ರಮ ಎಂದು ಸಾಬೀತಾದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10000 ರೂ ದಂಡ ವಿಧಿಸುವ ಸಾಧ್ಯತೆ ಇದೆ ಎಂದು ಅವರು ಅರಣ್ಯ ಇಲಾಖೆ ಡಿಸಿಎಫ್ಓ ರವೀಂದ್ರ ಸ್ಪಷ್ಟಪಡಿಸಿದರು.

 

ವರದಿಗಾರ ಎ ಚಿದಾನಂದ.

ಫ್ರೆಶ್ ನ್ಯೂಸ್

Latest Posts

Featured Videos