ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶೆ ಘೋಷ್ ವಿರುದ್ಧ ಎಫ್ಐಆರ್

ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶೆ ಘೋಷ್ ವಿರುದ್ಧ ಎಫ್ಐಆರ್

ನವದೆಹಲಿ, ಜ. 07: ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್ಯು) ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಘಟಕದ ಅಧ್ಯಕ್ಷೆ ಐಷ್ ಘೋಷ್ ಮತ್ತು ಇತರೆ 19 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಭಾನುವಾರ ನಡೆದ ಹಿಂಸಾಚಾರದ ಘಟನೆಗೂ ಮುನ್ನ ಐಷ್ ಘೋಷ್ ಮತ್ತು ಇತರರು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಸರ್ವರ್ ಕೊಠಡಿಯನ್ನು ಧ್ವಂಸಗೊಳಿಸಿದ್ದರು ಎಂದು ಆರೋಪಿಸಲಾಗಿದೆ.

ಜೆಎನ್ಯು ಆಡಳಿತ ನೀಡಿದ ದೂರಿನ ಅನ್ವಯ ಎಫ್ಐಆರ್ ದಾಖಲಿಸಲಾಗಿದೆ. ಜೆಎನ್ಯುದಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಟ್ಟು 3 ಎಫ್ಐಆರ್ಗಳನ್ನು ದಾಖಲಿಸಿದ್ದು, ಐಷ್ ಘೋಷ್ ಮತ್ತು ಇತರರ ವಿರುದ್ಧ ಜ. 5ರಂದು ಪ್ರಕರಣ ದಾಖಲಿಸಿದ್ದಾರೆ.

ಸೆಕ್ಯೂರಿಟಿ ಗಾರ್ಡ್ಗಳ ಮೇಲೆ ಹಲ್ಲೆ ಹಾಗೂ ಸರ್ವರ್ ರೂಮ್ನಲ್ಲಿ ನುಗ್ಗಿ ದಾಂಧಲೆ ನಡೆಸಿದ್ದಾರೆ ಅಂತ ಜೆಎನ್ಯುನ ಆಡಳಿತ ಮಂಡಳಿ ವಿದ್ಯಾರ್ಥಿ ಸಂಘಟನೆ ವಿರುದ್ಧ ದೂರು ನೀಡಿತ್ತು. ಈ ಸಂಬಂಧ ಜನವರಿ 5ರಂದು ದೆಹಲಿ ಪೊಲೀಸರು ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಐಶೆ ಘೋಷ್ ಹಾಗೂ ಇತರೆ 19ಜನರ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಮತ್ತೊಂದೆಡೆ ಜೆಎನ್ಯುನಲ್ಲಿ ನಡೆದ ಹಲ್ಲೆಯ ಹೊಣೆಯನ್ನ ಹಿಂದೂ ರಕ್ಷಾ ದಳ್ ಹೊತ್ತುಕೊಂಡಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು, ಹಿಂದೂ ರಕ್ಷಾ ದಳ್ನ ಮುಖ್ಯಸ್ಥ ಪಿಂಕಿ ಚೌಧರಿಯ ವಿಚಾರಣೆಯನ್ನ ನಡೆಸುತ್ತಿದ್ದಾರೆ ಅಂತ ಮೂಲಗಳಿಂದ ತಿಳಿದು ಬಂದಿದೆ. ಅಲ್ಲದೆ, ದೆಹಲಿ ಪೊಲೀಸ್ ಕ್ರೈಂ ಬ್ರಾಂಚ್ನ ತಂಡ ವಿವಿಯ ಆವರಣಕ್ಕೆ ಭೇಟಿ ನೀಡಿದ್ದು, ಜನವರಿ 5ರಂದು ನಡೆದ ಹಲ್ಲೆಯ ತನಿಖೆಯನ್ನ ಮುಂದುವರಿಸಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos