ಯುವತಿಯ ಶವ ಪತ್ತೆ

ಯುವತಿಯ ಶವ ಪತ್ತೆ

ಕಲಬುರಗಿ, ಡಿ.25 : ಇಲ್ಲಿನ ಸಿಟಿ ಸೆಂಟರ್ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳ ಶವ ಸುಟ್ಟ ಸ್ಥಿತಿಯಲ್ಲಿ ಶೌಚಾಲಯದಲ್ಲಿ ಪತ್ತೆಯಾಗಿದೆ. ಮೃತ ಯುವತಿಯನ್ನು ಸಂಗಮೇಶ್ವರ ಕಾಲೋನಿ ನಿವಾಸಿ ನಾಗರತ್ನ ಹಿರೇಮಠ್ (20) ಎಂದು ಪೊಲೀಸರು ತಿಳಿಸಿದ್ದಾರೆ.
ಸಿಟಿ ಸೆಂಟರ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈಕೆ ನಿನ್ನೆ ಮಧ್ಯಾಹ್ನ ಊಟಕ್ಕೆಂದು ಹೊರಹೋಗಿದ್ದವರು ವಾಪಸ್ ಬಂದಿರಲಿಲ್ಲ.

ಇಂದು ಬೆಳಗ್ಗೆ ಶೌಚಾಲಯದಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಮೂಡಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos