ಕೊನೆಗೂ ಸೆರೆಯಾದ ನರಹಂತಕ

ಕೊನೆಗೂ ಸೆರೆಯಾದ ನರಹಂತಕ

ಕುಣಿಗಲ್, ಡಿ. 25: ಜನರಲ್ಲಿ ಆತಂಕ ಸೃಷ್ಟಿಸಿದ್ದ ನರಭಕ್ಷಕ ಚಿರತೆ ಕೊನೆಗೂ ಸೆರೆ ಸಿಕ್ಕಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ತಾಲ್ಲೂಕಿನ ಕೊತ್ತಗೆರೆ ಹೋಬಳಿ ದೊಡ್ಡಮರಳುವಾಡಿ ಗ್ರಾಮದಲ್ಲಿ ಕಳೆದ 20 ದಿನಗಳ ಹಿಂದೆ ರೈತ ಹಾಗೂ ಮಹಿಳೆಯೊಬ್ಬರನ್ನು ತಿಂದು ಹಾಕಿದ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಕೆಲವು ಕಡೆ ಬೋನ್‍ಗಳನ್ನು ಇಟ್ಟಿದ್ದರು.

ಆದರೆ, ಚಾಲಾಕಿ ಚಿರತೆ ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಗ್ರಾಮಗಳಲ್ಲಿ ಓಡಾಡುತ್ತಿತ್ತು. ಇದರಿಂದ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂಹೂಡಿ ಚಿರತೆ ವಾಸಿಸುವ ಸ್ಥಳವನ್ನು ಪತ್ತೆಹಚ್ಚಲೆಂದು ಸ್ಕಾಟ್‍ಲೈಟ್ ಅಳವಡಿಸಿ ಅಗತ್ಯ ಕ್ರಮ ಕೈಗೊಂಡಿದ್ದರು. ನಿನ್ನೆ ರಾತ್ರಿ ಗಿಡದಪಾಳ್ಯದ ಬಳಿ ಇಟ್ಟಿದ್ದ ಬೋನಿಗೆ ಚಿರತೆ ಸೆರೆ ಸಿಕ್ಕಿದ್ದು, ಆಪರೇಷನ್ ಚೀತಾ ಯಶಸ್ವಿಯಾಗಿದೆ.

 

 

 

ಫ್ರೆಶ್ ನ್ಯೂಸ್

Latest Posts

Featured Videos