ವಿದೇಶಗಳಲ್ಲೂ ‘ಕುರುಕ್ಷೇತ್ರ’ದ ಹವಾ

ವಿದೇಶಗಳಲ್ಲೂ ‘ಕುರುಕ್ಷೇತ್ರ’ದ ಹವಾ

ಬೆಂಗಳೂರು, ಆ. 9: ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ತೆರೆ ಕಾಣುತ್ತಿರುವ ಚಿತ್ರಗಳೆಲ್ಲಿ ಸುಪರ್ ಹಿಟ್ ಆಗಿ ಮುಡಿಬರುತ್ತಿವೆ. ಹೌದು, ಚಿತ್ರರಂಗದಲ್ಲಿ ಬಹುನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’ ಇಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ. ರಾಜ್ಯದ ಹಲವೆಡೆ ಮಧ್ಯರಾತ್ರಿಯಿಂದಲೇ ಶೋಗಳು ಆರಂಭವಾಗಿವೆ. ವಿದೇಶಗಳಲ್ಲೂ ‘ಕುರುಕ್ಷೇತ್ರ’ದ ಹವಾ ಜೋರಾಗಿಯೇ ಇದೆ.  ‘

‘ಕುರುಕ್ಷೇತ್ರ’, ಮಹಾಭಾರತ ಮಹಾಕಾವ್ಯದ ಮಹೋನ್ನತ ದೃಶ್ಯ ವೈಭವ. ದುರ್ಯೋಧನನಾಗಿ ಚಾಲೆಂಜಿಂಗ್ಸ್ಟಾರ್ಗೆ 50ನೇ ಚಿತ್ರದ ಸಂಭ್ರಮ ಬೇರೆ, ಭೀಷ್ಮನಾಗಿ ಅಂಬಿ, ಕರ್ಣನಾಗಿ ಅರ್ಜುನ್ ಸರ್ಜಾ, ಅರ್ಜುನನಾಗಿ ಸೋನು ಸೂದ್ ಮಹೋನ್ನತ ಪಾತ್ರಗಳಾಗಿ ಮೇಳೈಸಿರೋ ಚಿತ್ರ ಇದು. 3ಡಿಯಲ್ಲಿ ತಯಾರಾಗಿರೋ ಈ ವೈಭವದ ಚಿತ್ರ ವರಮಹಾಲಕ್ಷ್ಮಿ ಹಬ್ಬದ ದಿನ ವಿಶ್ವದಾದ್ಯಂತ ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿದೆ.

ಕನ್ನಡ ಮತ್ತು ತೆಲುಗು 2 ಭಾಷೆಗಳಲ್ಲಿ ಬಿಡುಗಡೆಯಾಗಿರುವ ‘ಕುರುಕ್ಷೇತ್ರ’ ಟಿಕೆಟ್ಗೆ ಆನ್ಲೈನ್ ಬುಕ್ಕಿಂಗ್ ಭರ್ಜರಿಯಾಗಿದೆ. ಅಮೆರಿಕದಲ್ಲಿ ಲಾಸ್ ಏಂಜಲೀಸ್. ಸ್ಯಾಂಜೋಸ್, ಸಾವೋ ಪೌಲೋ, ಕೇಂಬ್ರಿಡ್ಜ್, ನ್ಯೂಯಾರ್ಕ್ ಸೇರಿದಂತೆ 40ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ಒಂದು ದಿನ ಮುಂಚಿತವಾಗಿಯೇ ಅಂದರೆ ರಿಲೀಸ್ ಆಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos